ರಸ್ತೆಯಲ್ಲಿ ನಗ್ನವಾಗಿ ಓಡಾಡುವ ವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿದ ಸ್ಪೇನ್ ಕೋರ್ಟ್
ಮ್ಯಾಡ್ರಿಡ್: ವೆಲೆನ್ಸಿಯಾ ನಗರದ ರಸ್ತೆಗಳಲ್ಲಿ ನಗ್ನವಾಗಿ ನಡೆದು, ನ್ಯಾಯಾಲಯದ ಕಲಾಪಗಳಿಗೂ ನಗ್ನವಾಗಿಯೇ ಹಾಜರಾಗಲು ಪ್ರಯತ್ನಿಸಿ, ದಂಡದ ಶಿಕ್ಷೆಗೆ ಒಳಗಾಗಿದ್ದ ವ್ಯಕ್ತಿಯೊಬ್ಬನ ಪರವಾಗಿ ಸ್ಪೇನ್ ಹೈಕೋರ್ಟ್ ಒಂದು ತೀರ್ಪು ನೀಡಿದೆ ಎಂದು reuters.com ವರದಿ ಮಾಡಿದೆ.
ಪ್ರಾಂತೀಯ ರಾಜಧಾನಿಯ ಹೊರವಲಯದಲ್ಲಿರುವ ಅಲ್ದೈದಾ ರಸ್ತೆಗಳಲ್ಲಿ ನಗ್ನವಾಗಿ ನಡೆದಾಡಿದ್ದ ವ್ಯಕ್ತಿಗೆ ಕೆಳ ಹಂತದ ನ್ಯಾಯಾಲಯವು ವಿಧಿಸಿದ್ದ ವಾರ್ಷಿಕ ದಂಡವನ್ನು ರದ್ದುಗೊಳಿಸಿರುವುದಾಗಿ ತಿಳಿಸಿರುವ ಪ್ರಾಂತೀಯ ಹೈಕೋರ್ಟ್, ಸಾರ್ವಜನಿಕ ನಗ್ನತೆ ಕುರಿತು ಕಾನೂನಿನಲ್ಲಿ ನಿರ್ವಾತವಿದೆ ಎಂದೂ ಅಭಿಪ್ರಾಯಪಟ್ಟಿದೆ.
ನ್ಯಾಯಾಲಯದ ಕಟ್ಟಡದೊಳಗೆ ಪ್ರವೇಶಿಸುವುದಕ್ಕೆ ಆದೇಶಿಸುವುದಕ್ಕೂ ಮುನ್ನ, ಕೇವಲ ಎತ್ತರದ ನಿಲುವಿನ ಶೂ ಧರಿಸಿ ಬಂದಿದ್ದ ಅಲೆಜಾಂಡ್ರೊ ಕೊಲೊಮರ್ (29) ಅವರನ್ನು ಚಿತ್ರೀಕರಿಸಿಕೊಂಡು, ನಂತರ ನ್ಯಾಯಾಲಯದ ಆವರಣದೊಳಕ್ಕೆ ಬಿಡಲಾಯಿತು. ನ್ಯಾಯಾಲಯ ಕಲಾಪದಲ್ಲಿ ಆತ, ತನಗೆ ವಿಧಿಸಲಾಗಿರುವ ದಂಡದಿಂದ ತನ್ನ ಸೈದ್ಧಾಂತಿಕ ಸ್ವಾತಂತ್ರ್ಯದ ಹರಣವಾಗಿದೆ ಎಂದು ವಾದಿಸಿದ್ದಾನೆ.
ಈ ಕುರಿತು Reuters ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಅಲೆಜಾಂಡೊ ಕೊಲೊಮರ್, ನಾನು 2020ರಿಂದ ಸಾರ್ವಜನಿಕವಾಗಿ ನಗ್ನವಾಗಿ ಓಡಾಡುತ್ತಿದ್ದೇನೆ. ಈ ಅವಧಿಯಲ್ಲಿ ನನಗೆ ಒಮ್ಮೆ ಚಾಕುವಿನ ಬೆದರಿಸಿದ್ದು ಬಿಟ್ಟರೆ, ಅವಮಾನಕ್ಕಿಂತ ಸ್ವಾಗತವೇ ಹೆಚ್ಚು ದೊರೆತಿದೆ ಎಂದು ಹೇಳಿದ್ದಾನೆ.
ಇದನ್ನೂ ಓದಿ: ರ್ಯಾಪ್ ಪ್ರದರ್ಶನದ ಆಕಾಂಕ್ಷಿಗಳಾಗಿದ್ದ ಮೂವರು ವಾರಗಳ ನಾಪತ್ತೆಯ ನಂತರ ಶವವಾಗಿ ಪತ್ತೆ