ತೈವಾನ್ ನಲ್ಲಿ ಭೂಕಂಪ: ಮಗು ಸೇರಿ 3 ಸಾವು
ತೈಪೆ, ಫೆ.6: ತೈವಾನ್ ದಕ್ಷಿಣ ಭಾಗದಲ್ಲಿ 6.4 ತೀವ್ರತೆಯಲ್ಲಿ ಭೂಕಂಪ ಸಂಭವಿಸಿದ ಪರಿಣಾಮವಾಗಿ ಮೂವರು ಮೃತಪಟ್ಟಿದ್ದು, 150ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಶನಿವಾರ ಬೆಳಗ್ಗೆ ಸಂಭವಿಸಿದೆ.
ಭೂಕಂಪದಿಂದಾಗಿ ಕಟ್ಟಡವೊಂದರಲ್ಲಿದ್ದ 10 ತಿಂಗಳ ಮಗು, 50 ಹರೆಯದ ಓರ್ವ ಪುರುಷ ಮತ್ತು 55ರ ಹರೆಯದ ಮಹಿಳೆ ಮೃತಪಟ್ಟಿದ್ದಾರೆ. ಆ ಕಟ್ಟಡದೊಳಗೆ ಸಿಲುಕಿದ್ದ 29 ನಿವಾಸಿಗಳು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.ಏಳು ಅಂತಸ್ತಿನ ಕಟ್ಟಡವೊಂದು ಕುಸಿದಿದ್ದು, ಅದರಲ್ಲಿದ್ದ 200 ಮಂದಿಯನ್ನು ರಕ್ಷಿಸಲಾಗಿದೆ.,.
ತೈವಾನ್ನಲ್ಲಿ 1999ರಲ್ಲಿ 7.6 ತೀವ್ರತೆಯಲ್ಲಿ ಭೂಕಂಪ ಸಂಭವಿಸಿ ಸುಮಾರು 2,400 ಜನರು ಬಲಿಯಾಗಿದ್ದರು.
Next Story