ಟೆಕ್ಸಾಸ್ನಲ್ಲಿ ಗುಂಡು ಹಾರಾಟ: ಕನಿಷ್ಠ 8 ಸಾವು
ಪ್ಲಾನೊ (ಟೆಕ್ಸಾಸ್), ಸೆ. 11: ಅಮೆರಿಕದ ಟೆಕ್ಸಾಸ್ ರಾಜ್ಯದ ಪ್ಲಾನೊ ನಗರದಲ್ಲಿ ನಡೆದ ಗುಂಡು ಹಾರಾಟದಲ್ಲಿ ಶಂಕಿತ ಹಂತಕನೂ ಸೇರಿದಂತೆ ಕನಿಷ್ಠ ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ನಾರ್ತ್ ಟೆಕ್ಸಾಸ್ ಅಧಿಕಾರಿಗಳು ರವಿವಾರ ರಾತ್ರಿ ತಿಳಿಸಿದರು.
ಡಲ್ಲಾಸ್ನಿಂದ ಸುಮಾರು 33 ಕಿ.ಮೀ. ದೂರದಲ್ಲಿರುವ ಪ್ಲಾನೊದಲ್ಲಿ ರವಿವಾರ ರಾತ್ರಿ ಸುಮಾರು 8 ಗಂಟೆಯ ಹೊತ್ತಿಗೆ ಗುಂಡು ಹಾರಾಟ ನಡೆದಿದೆ.
ಮೃತ ಸಂತ್ರಸ್ತರು ಹಾಗೂ ಶಂಕಿತನ ಗುರುತನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಗುಂಡು ಹಾರಾಟಕ್ಕೆ ಕಾರಣವೂ ಗೊತ್ತಾಗಿಲ್ಲ.
ಈ ಮಾದರಿಯ ಗುಂಡು ಹಾರಾಟ ಸಣ್ಣ ನಗರ ಪ್ಲಾನೊದಲ್ಲಿ ನಡೆದಿರುವುದು ಅಸಹಜವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
Next Story