ಕಾಬೂಲ್ ವಿಮಾನ ನಿಲ್ದಾಣದ ಸಮೀಪ ಲ್ಯಾಂಡ್ ಆದ ರಾಕೆಟ್ ಗಳು: ಆತಂಕದ ಸ್ಥಿತಿ ನಿರ್ಮಾಣ
ಅಮೆರಿಕದ ರಕ್ಷಣಾ ಕಾರ್ಯದರ್ಶಿ ಆಗಮನದ ನಂತರ ನಡೆದ ಘಟನೆ
ಕಾಬೂಲ್, ಸೆ.27: ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್ ಅಫ್ಘಾನಿಸ್ತಾನದ ವಿಮಾನ ನಿಲ್ದಾಣದಲ್ಲಿ ಬಂದಿಳಿದ ನಂತರ ರಾಕೆಟ್ ಗಳು ವಿಮಾನ ನಿಲ್ದಾಣದ ಸಮೀಪ ಲ್ಯಾಂಡ್ ಆಗಿ ಆತಂಕ ಸೃಷ್ಟಿಸಿದೆ.
“ಇಂದು ಬೆಳಗ್ಗೆ ರಾಕೆಟ್ ಗಳು ಹಾಮಿದ್ ಕರ್ಝಾಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ಆದರೆ ಯಾವುದೇ ಅಪಾಯ ಸಂಭವಿಸಿಲ್ಲ” ಎಂದು ಆಂತರಿಕ ಸಚಿವಾಲಯದ ವಕ್ತಾರ ನಜೀಬ್ ದಾನಿಷ್ ಟ್ವೀಟ್ ಮಾಡಿದ್ದಾರೆ.
ಬುಧವಾರ ಬೆಳಗ್ಗೆ ಮ್ಯಾಟಿಸ್ ಅಫ್ಘಾನಿಸ್ತಾನಕ್ಕೆ ಬಂದಿಳಿದಿದ್ದಾರೆ. ಇವರ ಜೊತೆ ನ್ಯಾಟೋದ ಮುಖ್ಯಸ್ಥ ಜೆನ್ಸ್ ಸ್ಟೋಲ್ ಟನ್ ಬರ್ಗ್ ಕೂಡ ಕಾಬೂಲ್ ಗೆ ಆಗಮಿಸಿದ್ದಾರೆ. 3 ರಾಕೆಟ್ ಗಳು ಲ್ಯಾಂಡ್ ಆದ ನಂತರ ಗುಂಡಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಎಲ್ಲಾ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದ್ದು, ವಿಮಾನ ನಿಲ್ದಾಣದಲ್ಲಿದ್ದವರನ್ನು ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.
Next Story