ಸಂವಿಧಾನಬದ್ಧವಾಗಿ ಜವಾಬ್ದಾರಿ ನಿರ್ವಹಿಸುತ್ತೇನೆ: ಸ್ಪೀಕರ್ ರಮೇಶ್ ಕುಮಾರ್
ಬೆಂಗಳೂರು, ಜು.9: ನಾನು ಇಂದು ಕಚೇರಿಯಲ್ಲಿರುತ್ತೇನೆ. ಯಾವುದೇ ಶಾಸಕರು ಬಂದು ನನ್ನನ್ನು ಭೇಟಿಯಾಗಬಹುದು. ಇದುವರೆಗೂ ನನ್ನ ಯಾವ ಶಾಸಕರು ಸಂಪರ್ಕ ಮಾಡಿ ಕಾಲಾವಕಾಶ ಕೇಳಿಲ್ಲ. ಸಂವಿಧಾನಕ್ಕೆ ಬದ್ದವಾಗಿ ನಾನು ನನ್ನ ಜವಾಬ್ದಾರಿ ನಿರ್ವಹಿಸುತ್ತೇನೆ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ಇಂದು ಬೆಳಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಅತೃಪ್ತ ಶಾಸಕರ ವಿರುದ್ದ ಕ್ರಮಕ್ಕೆ ಸಂಬಂಧಿಸಿದಂತೆ ನನಗೆ ಯಾವುದೇ ದೂರು ಬಂದಿಲ್ಲ. ಸ್ಪೀಕರ್ ಕಚೇರಿಗೆ ದೂರು ನೀಡಿದ್ದರೆ ಪರಿಶೀಲನೆ ನಡೆಸುತ್ತೇನೆ ಎಂದು ತಿಳಿಸಿದರು.
Next Story