ಸರಣಿ ಅಪಘಾತ: ಆರು ಕಾರು, ಬಿಎಂಟಿಸಿ ಬಸ್ಗೆ ಹಾನಿ
ಬೆಂಗಳೂರು, ಜ.10: ಬಿಎಂಟಿಸಿ ಬಸ್ ಕಾರ್ಗೆ ಢಿಕ್ಕಿ ಹೊಡೆದ ಪರಿಣಾಮ ಸರಣಿ ಅಪಘಾತ ನಡೆದಿರುವ ಘಟನೆ ಜಯನಗರ ಪಂಪ್ಹೌಸ್ ಸಿಗ್ನಲ್ ಬಳಿ ಸಂಭವಿಸಿದೆ.
ಶುಕ್ರವಾರ ಬೆಳಗ್ಗೆ ಬಿಎಂಟಿಸಿ ವೋಲ್ವೋ ಬಸ್ ಏರ್ಪೋರ್ಟ್ ರಸ್ತೆಯಿಂದ ಬಿಟಿಎಂ ಲೇಔಟ್ ಕಡೆ ತೆರಳುತ್ತಿತ್ತು. ಈ ವೇಳೆ ಚಾಲಕನ ಅಜಾಗ್ರತೆಯಿಂದ ಬಸ್ ಕಾರ್ಗೆ ಢಿಕ್ಕಿ ಹೊಡೆದಿದೆ. ಇದರ ಪರಿಣಾಮ ಒಂದಕ್ಕೊಂದು ವಾಹನಗಳು ಗುದ್ದಿಕೊಂಡು ಒಟ್ಟು 6 ಕಾರುಗಳು ಹಾಗೂ ಮತ್ತೊಂದು ಬಿಎಂಟಿಸಿ ಬಸ್ಗೆ ಹಾನಿಯಾಗಿದೆ.
ಘಟನೆಯಲ್ಲಿ ಯಾರಿಗೂ ಅಪಾಯವಾಗಿಲ್ಲ. ಘಟನಾ ಸ್ಥಳದಲ್ಲಿ ಕೆಲ ಕಾಲ ಟ್ರಾಫಿಕ್ ಜಾಮ್ ಆಗಿದ್ದು, ಟ್ರಾಫಿಕ್ ಪೊಲೀಸರು ಎಲ್ಲಾ ವಾಹನಗಳನ್ನು ಸ್ಥಳದಿಂದ ತೆರವು ಮಾಡಿ ಡ್ಯಾಮೇಜ್ ಆದ ವಾಹನಗಳನ್ನು ಮೈಕೋ ಲೇಔಟ್ ಠಾಣೆಗೆ ರವಾನಿಸಿದ್ದಾರೆ. ಈ ಸಂಬಂಧ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಸ್ ಚಾಲಕ ಧರ್ಮೇಂದ್ರ ಸ್ಥಳದಿಂದ ಪರಾರಿಯಾಗಿದ್ದಾರೆ.
Next Story