ಆ. 25ಕ್ಕೆ ಹುಬ್ಬಳ್ಳಿ-ಮುಂಬೈ ವಿಮಾನ ಸಂಚಾರ ಪುನರಾರಂಭ
ಹುಬ್ಬಳ್ಳಿ, ಆ.2: ಕೊರೋನ ಸೋಂಕು ಅಧಿಕಗೊಂಡಿದ್ದ ಕಾರಣದಿಂದ ಸ್ಥಗಿತಗೊಂಡಿದ್ದ ಹುಬ್ಬಳ್ಳಿಯಿಂದ ಮುಂಬೈಗೆ ಸಂಚಾರ ಮಾಡುವ ಇಂಡಿಗೋ ಸಂಸ್ಥೆಯ ನೇರ ವಿಮಾನ ಆ. 25 ಕ್ಕೆ ಪುನರಾರಂಭವಾಗಲಿದೆ.
ಇದೇ ಸಂಸ್ಥೆಯ ವಿಮಾನಗಳು ಈಗಾಗಲೇ ಹುಬ್ಬಳ್ಳಿಯಿಂದ ಬೆಂಗಳೂರು ಮತ್ತು ಕೇರಳದ ಕಣ್ಣೂರಿಗೆ ಸಂಚರಿಸುತ್ತಿವೆ. 25 ರಿಂದ ನಗರದಿಂದ ಮುಂಬೈ, ಅಹ್ಮದಾಬಾದ್, ಚೆನ್ನೈ, ಮಂಗಳೂರು ಮತ್ತು ಕೊಚ್ಚಿಗೆ ಸಂಚಾರ ಆರಂಭಿಸಲಿದೆ ಎಂದು ಇಂಡಿಗೋ ಸಂಸ್ಥೆ ಸಿಬ್ಬಂದಿ ತಿಳಿಸಿದ್ದಾರೆ.
ಟಿಕೆಟ್ ಬುಕ್ಕಿಂಗ್ ಆರಂಭವಾಗಲಿದ್ದು, ಸ್ಟಾರ್ ಏರ್ ಸಂಸ್ಥೆಯ ವಿಮಾನಗಳು ಆ.16 ರಿಂದ ಇಲ್ಲಿಂದ ದಿಲ್ಲಿಯ ಹೊರ ವಲಯದ ಪ್ರದೇಶ ಹಿಂಡನ್ ಮತ್ತು ಬೆಂಗಳೂರಿಗೆ ಸಂಚಾರ ಆರಂಭಿಸಲಿದೆ. ವಾರದಲ್ಲಿ ನಾಲ್ಕು ದಿನ ಸೋಮವಾರ, ಮಂಗಳವಾರ, ಶುಕ್ರವಾರ ಮತ್ತು ರವಿವಾರ ಹಿಂಡನ್ಗೆ ವಿಮಾನ ಸಂಚರಿಸಲಿದೆ.
Next Story