ಕರ್ನಾಟಕ ಮುಕ್ತ ವಿವಿ: ಸೆ.1ರಿಂದ ಬಿಎ, ಬಿಕಾಂ, ಎಂಬಿಎ ಪರೀಕ್ಷೆ
ಬೆಂಗಳೂರು, ಆ.25: ಕೋವಿಡ್ನಿಂದ ಮುಂದೂಲ್ಪಟ್ಟಿದ್ದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಬಿಎ, ಬಿಕಾಂ ಹಾಗೂ ಎಂಬಿಎ ಪರೀಕ್ಷೆ ಸೆ.1ರಿಂದ ನಗರದ ವಿವಿಪುರಂ ಕಲಾ ಕಾಲೇಜಿನಲ್ಲಿ ನಡೆಯಲಿದೆ ಎಂದು ಕರ್ನಾಟಕ ಮುಕ್ತ ವಿವಿ ತಿಳಿಸಿದೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ www.ksoumysuru.ac.in ಇಲ್ಲಿಗೆ ಹಾಗೂ ಪ್ರಾದೇಶಿಕ ನಿರ್ದೇಶಕರು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಬೆಂಗಳೂರು ಪ್ರಾದೇಶಿಕ ಕೇಂದ್ರ ನಂ.61, 5ನೇ ಮುಖ್ಯರಸ್ತೆ, 5ನೇ ಅಡ್ಡರಸ್ತೆ, ಚಾಮರಾಜಪೇಟೆ ಬೆಂ.18, ದೂ.26603664ಕ್ಕೆ ಸಂಪರ್ಕಿಸಲು ಪ್ರಕಟನೆಯಲ್ಲಿ ತಿಳಿಸಲಾಗಿದೆ.
Next Story