ವ್ಹೀಲಿಂಗ್: 31 ಬೈಕ್ ಸವಾರ ಬಂಧನ, 28 ವಾಹನಗಳ ಜಪ್ತಿ
ಬೆಂಗಳೂರು, ಸೆ.1: ರಾಜಧಾನಿ ಬೆಂಗಳೂರಿನಲ್ಲಿ ವ್ಹೀಲಿಂಗ್ ಮೂಲಕ ಸಂಚಾರ ನಿಯಮ ಉಲ್ಲಂಘಿಸುತ್ತಿರುವ ದಿನೇ ದಿನೇ ಕೇಳಿಬರುತ್ತಿರುವ ಹಿನ್ನೆಲೆ ವಿಶೇಷ ಕಾರ್ಯಾಚರಣೆ ನಡೆಸಿದ ಸಂಚಾರ ಪೊಲೀಸರು, ಸೋಮವಾರ ಒಂದೇ ದಿನದಲ್ಲಿ 17 ಪ್ರಕರಣ ದಾಖಲಿಸಿ, 28 ವಾಹನಗಳನ್ನು ಜಪ್ತಿ ಮಾಡಿದ್ದಾರೆ.
ವ್ಹೀಲಿಂಗ್ ಮಾಡುವುದು ಅಪಾಯಕಾರಿ ಎಂದು ಗೊತ್ತಿದ್ದರೂ, ಮನೋರಂಜನೆಗಾಗಿ ವ್ಹೀಲಿಂಗ್ ಮಾಡುತ್ತಿರುವುದು ಎಲ್ಲೆಡೆ ಕಂಡು ಬಂದಿತ್ತು. ಅಲ್ಲದೆ, ವಾಹನ ಸವಾರರಿಂದಲೂ ವ್ಯಾಪಕ ದೂರು ಕೇಳಿ ಬಂದಿದ್ದವು. ಈ ನಿಟ್ಟಿನಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಂಡ ಸಂಚಾರಿ ಪೊಲೀಸರು 17 ಪ್ರಕರಣ ದಾಖಲಿಸಿಕೊಂಡು, 28 ಬೈಕ್ ಜಪ್ತಿ ಮಾಡಿ 31 ಬೈಕ್ ಸವಾರರನ್ನು ಬಂಧಿಸಿದ್ದಾರೆ.
Next Story