ಗಾಂಜಾ ಆಯಿಲ್ ಮಾರಾಟ ಆರೋಪ: ಇಬ್ಬರ ಬಂಧನ
ಬೆಂಗಳೂರು ಸೆ.17: ಮಾದಕ ವಸ್ತು ಗಾಂಜಾ ಆಯಿಲ್ ಮಾರಾಟ ಮಾಡುತ್ತಿದ್ದ ಆರೋಪದಡಿ ಇಬ್ಬರನ್ನು ಜಾಲಹಳ್ಳಿ ಠಾಣಾ ಪೊಲೀಸರು ಬಂಧಿಸಿ 16 ಲಕ್ಷ ರೂ. ಮೌಲ್ಯದ ಗಾಂಜಾ ಆಯಿಲ್ನ್ನು ವಶಪಡಿಸಿಕೊಂಡಿದ್ದಾರೆ.
ವೈಟ್ಫೀಲ್ಡ್ನ ಸಿ.ಜೆ.ಹಳ್ಳಿಯ ಲೂಬಿನ್ ಅಮಲ್ನಾಥ್(25) ಹಾಗೂ ಕನ್ನಮಂಗಲದ ವಿವೇಕ್ (22) ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳು ಕೇರಳದ ವ್ಯಕ್ತಿಯೊಬ್ಬನಿಂದ ಗಾಂಜಾ ಆಯಿಲ್ ತಂದು ಅದನ್ನು ಸಣ್ಣ ಸಣ್ಣ ಸ್ಟೀಲ್ ಡಬ್ಬಿಗಳಲ್ಲಿ 10 ಎಂಎಲ್ ನಂತೆ ತುಂಬಿ ಮಾರಾಟ ಮಾಡುತ್ತಿದ್ದರು. ಫೇಸ್ಬುಕ್ ಮೂಲಕವೂ ಗಿರಾಕಿಗಳನ್ನು ಆರೋಪಿಗಳು ಸಂಪರ್ಕಿಸಿರುವುದು ತನಿಖೆಯಲ್ಲಿ ಕಂಡು ಬಂದಿದೆ.
ಜಾಲಹಳ್ಳಿಯ ಹೆಚ್.ಎಂ.ಟಿ. ವಾಚ್ ಫ್ಯಾಕ್ಟರಿ ಬಳಿ ಗಾಂಜಾ ಆಯಿಲ್ ಸೇವನೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಹಿಡಿದು ವಿಚಾರಣೆ ನಡೆಸಿ, ಮಾಹಿತಿ ಸಂಗ್ರಹಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
Next Story