ಸಂಸದ ಡಾ.ಉಮೇಶ್ ಜಾಧವ್ಗೆ ಎದೆ ನೋವು: ಆಸ್ಪತ್ರೆಗೆ ದಾಖಲು
ಬೆಂಗಳೂರು, ಸೆ.28: ಬಿಜೆಪಿ ಸಂಸದ ಡಾ.ಉಮೇಶ್ ಜಾಧವ್ ಅವರಿಗೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆ ನಗರದ ಜಯದೇವ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.
ಇತ್ತೀಚೆಗೆ ಕೊರೋನದಿಂದ ಗುಣಮುಖರಾಗಿ ಬಂದಿದ್ದ ಸಂಸದ ಉಮೇಶ್ ಜಾಧವ್ ಅವರಿಗೆ, ಸಣ್ಣ ಪ್ರಮಾಣದ ಎದೆನೋವು ಕಾಣಿಸಿಕೊಂಡಿದೆ ಎನ್ನಲಾಗಿದೆ.
ಈ ಕುರಿತು ಟ್ವಿಟ್ ಮಾಡಿದ ಸಂಸದ ಜಾಧವ್, ಶೀಘ್ರವೇ ಗುಣಮುಖನಾಗಿ ಹಿಂದಿರುಗಲಿದ್ದೇನೆ ಎಂದು ನುಡಿದಿದ್ದಾರೆ.
Due to mild chest pain felt this morning, visited #JayadevaHospital, Bangalore & I have undergone some routine test under the supervision of Dr Manjunath CN, Director.
— Dr. Umesh G Jadhav MPLS (@UmeshJadhav_BJP) September 28, 2020
I am being advised to get admitted for further evaluation.
Nothing to worry, I will be fine soon.@BJP4India
Next Story