ಸ್ಯಾಂಡಲ್ವುಡ್ ಡ್ರಗ್ಸ್ ದಂಧೆ ಪ್ರಕರಣ: ಆದಿತ್ಯ ಆಳ್ವನ ಮಾಹಿತಿ ಸಂಗ್ರಹ?
ಬೆಂಗಳೂರು, ಅ.20: ಸ್ಯಾಂಡಲ್ವುಡ್ ಡ್ರಗ್ಸ್ ದಂಧೆ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಆದಿತ್ಯ ಆಳ್ವನ ಕುರಿತು ಸಿಸಿಬಿ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಆರೋಪಿಯು ಹೊರ ರಾಜ್ಯ ಹಾಗೂ ವಿದೇಶದಿಂದ ಮಾದಕ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದ್ದ. ಜತೆಗೆ ಗಣ್ಯರ ಮಕ್ಕಳನ್ನು ಸೆಳೆದು ಈತನ ಒಡೆತನದ ಹೌಸ್ ಆಫ್ ಲೈಫ್ನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ಮಾದಕ ವಸ್ತುಗಳನ್ನು ಮಾರಾಟಕ್ಕೆ ಮುಂದಾಗುತ್ತಿದ್ದ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ.
ಈ ಕಾರ್ಯಕ್ರಮಗಳಲ್ಲಿ ಎಕ್ಸ್ಟೆಸಿ ಮಾತ್ರೆಗಳು, ಗಾಂಜಾ, ಕೊಕೇನ್, ಎಂಡಿಎಂಎ ಬಳಕೆ ಮಾಡಲಾಗುತ್ತಿತ್ತು. ಬಂಧಿತ ರವಿಶಂಕರ್ ಹಾಗೂ ಇತರೆ ಆರೋಪಿಗಳು ಕೂಡ ಭಾಗಿಯಾಗಿ ಮಾದಕ ವಸ್ತುಗಳನ್ನು ಪೂರೈಕೆ ಮಾಡಿ ಅಧಿಕ ಹಣ ಗಳಿಸುತ್ತಿದ್ದರು ಎನ್ನಲಾಗುತ್ತಿದೆ.
Next Story