ಬೆಂಗಳೂರಿನಿಂದ ಶಿರಡಿಗೆ ಅಂಬಾರಿ ಡ್ರೀಮ್ ಕ್ಲಾಸ್ ಬಸ್ ಸಂಚಾರ
ಬೆಂಗಳೂರು, ನ.20: ಕೆಎಸ್ಆರ್ಟಿಸಿ ವತಿಯಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು-ಶಿರಡಿ ಮಾರ್ಗದಲ್ಲಿ ಅಂಬಾರಿ ಡ್ರೀಮ್ ಕ್ಲಾಸ್ ಸಾರಿಗೆಯನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ.
ಕೆಎಸ್ಆರ್ಟಿಸಿಯ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಬೆಂಗಳೂರು-ಶಿರಡಿ ವಯಾ ಚಿತ್ರದುರ್ಗ, ಹುಬ್ಬಳಿ ಮತ್ತು ಪೂನಾ ಮಾರ್ಗದಲ್ಲಿ ಅಂಬಾರಿ ಡ್ರೀಮ್ ಕ್ಲಾಸ್ ಸಾರಿಗೆಯನ್ನು ನ.20ರಿಂದ ಪುನರಾರಂಭಿಸುತ್ತಿದೆ. ಪ್ರತಿದಿನ ಮಧ್ಯಾಹ್ನ 1ಕ್ಕೆ ಹೊರಟು ಬೆಳಗ್ಗೆ 6.30ಕ್ಕೆ ಶಿರಡಿ ತಲುಪುತ್ತದೆ. ಪ್ರಯಾಣ ದರ ಒಬ್ಬರಿಗೆ 1600 ರೂ.ಆಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
Next Story