ಕಳವು ಪ್ರಕರಣ: 39 ಆರೋಪಿಗಳ ಬಂಧನ, 174 ಬೈಕ್ ಗಳು ಜಪ್ತಿ
ಬೆಂಗಳೂರು, ನ.27: ಬೈಕ್ ಕಳವು ಪ್ರಕರಣ ಸಂಬಂಧ ಕಾರ್ಯಾಚರಣೆ ನಡೆಸಿರುವ ಆಗ್ನೇಯ ವಿಭಾಗದ ಪೊಲೀಸರು ಐದು ಕಾರು, 174 ಬೈಕ್ಗಳನ್ನು ವಶಪಡಿಸಿಕೊಂಡು 39 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ನಗರದ ಕೋರಮಂಗಲ, ಮಡಿವಾಳ ಹಾಗೂ ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಆಗ್ನೇಯ ವಿಭಾಗದಲ್ಲಿ 174 ಬೈಕ್ಗಳ ಕಳ್ಳತನವಾಗಿದ್ದು, ಅವುಗಳನ್ನು ಪತ್ತೆ ಮಾಡಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಶ್ರೀನಾಥ್ ಜೋಷಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಕ್ಷೇತ್ರದಲ್ಲಿ ಬೈಕ್ ಜಪ್ತಿ
ತಮಿಳುನಾಡಿನ ಮುಖ್ಯಮಂತ್ರಿ ಪಳನಿಸ್ವಾಮಿ ಕ್ಷೇತ್ರವಾದ ಎಡಪ್ಪಾಡಿಯಲ್ಲಿ ಕದ್ದ ಬೈಕ್ಗಳು ಪತ್ತೆಯಾಗಿದ್ದು, ಸದ್ಯ ಇದನ್ನು ಬೆಂಗಳೂರಿನ ಪೊಲೀಸರು ಪತ್ತೆ ಹಚ್ಚಿದ್ದಾರೆ. 174 ಬೈಕ್ಗಳಲ್ಲಿ ಸುಮಾರು 35ಕ್ಕೂ ಹೆಚ್ಚು ಬೈಕ್ಗಳು ಎಡಪ್ಪಾಡಿಯಲ್ಲಿ ಓಡಾಡುತ್ತಿದ್ದವು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ.
Next Story