ಹೊಸ ವರ್ಷಾಚರಣೆಗೆ ಹೊಸ ಮಾರ್ಗಸೂಚಿ: ಕಮಲ್ ಪಂತ್
ಬೆಂಗಳೂರು, ಡಿ.26: ಕೋವಿಡ್-19 ಸೋಂಕು ಹಿನ್ನೆಲೆ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಪಾಲನೆ ಮಾಡಲು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದರು.
ಶನಿವಾರ ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾರ್ಗಸೂಚಿ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಶೀಘ್ರದಲ್ಲಿಯೇ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಕೋವಿಡ್ ನಿಯಮಾವಳಿಗಳಂತೆ ನೂತನ ವರ್ಷಕ್ಕೂ ಗೃಹ ಸಚಿವರು ಮಾರ್ಗಸೂಚಿ ಹೊರಡಿಸಲಿದ್ದಾರೆ. ಡಿ.30 ಮತ್ತು 31ರಂದು ಆಚರಣೆಗೆ ಅವಕಾಶ ನೀಡದೆ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಸಭೆ ನಡೆಯಲಿದ್ದು, ಯಾವ ರೀತಿ ವಿನಾಯಿತಿ ನೀಡಬೇಕೆಂಬುವುದು ಚರ್ಚಿಸಿ ನಂತರ ಪ್ರಕಟಿಸಲಾಗುವುದು ಎಂದರು.
Next Story