ಪ್ರಾಂಶುಪಾಲೆ ನಝೀಬುನಿಸ್ಸಾಗೆ ಡಾಕ್ಟರೇಟ್ ಪ್ರದಾನ
ಬೆಂಗಳೂರು, ಜ.19: ನಗರದ ಬಿಇಎಸ್ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲೆ, ಕಾನೂನು ತಜ್ಞೆ ನಝೀಬುನಿಸ್ಸಾ ಅವರಿಗೆ ಗುಲ್ಬರ್ಗ ವಿಶ್ವವಿದ್ಯಾಲಯವು ಡಾಕ್ಟರೇಟ್ ಪ್ರದಾನಿಸಿದೆ.
ಕಾನೂನು ಅಧ್ಯಯನ ವಿಭಾಗದಲ್ಲಿ ಪ್ರೊ.ದೇವಿದಾಸ್ ಜಿ.ಮಾಲೆ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ವಿಷಯಕ್ಕೆ ಗುಲ್ಬರ್ಗ ವಿಶ್ವವಿದ್ಯಾಲಯವು ನಝೀಬುನಿಸ್ಸಾ ಅವರಿಗೆ ಡಾಕ್ಟರ್ ಆಫ್ ಫಿಲಾಸಫಿ(ಕಾನೂನು) ಪಿಎಚ್ಡಿ ಪದವಿ ನೀಡಿದೆ.
ಹಲವು ವರ್ಷಗಳಿಂದ ನಗರದ ಪ್ರತಿಷ್ಠಿತ ಬಿಇಎಸ್ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲೆ ಆಗಿರುವ ನಝೀಬುನಿಸ್ಸಾ ಅವರು ಬಿಡುವಿನ ವೇಳೆಯಲ್ಲಿ ಆರು ತಿಂಗಳ ಕಾಲಾವಧಿಯೊಳಗೆ ಕಾನೂನಿನ ವಿಭಾಗದ ಅಧ್ಯಯನದಲ್ಲಿ ಸಮಗ್ರ ವಿಷಯ ಮಂಡಿಸಿ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಪಿಎಚ್ಡಿ ತಮ್ಮದಾಗಿಸಿಕೊಂಡಿರುವುದಕ್ಕೆ ಅವರ ಶಿಷ್ಯ ವೃಂದ, ಕಾಲೇಜಿನ ಸಿಬ್ಬಂದಿ ಪ್ರಶಂಸಿಸಿದ್ದಾರೆ.
Next Story