ಬೆಂಗಳೂರು: ಬಹುಮಹಡಿ ಕಟ್ಟಡಗಳ ರಸ್ತೆಯಲ್ಲಿ ಕಾಣಿಸಿಕೊಂಡ ಚಿರತೆ
ಬೆಂಗಳೂರು, ಜ.23: ನಸುಕಿನ ಜಾವ ಚಿರತೆಯೊಂದು ಬಹುಮಹಡಿ ಕಟ್ಟಡಗಳ ರಸ್ತೆಯಲ್ಲಿ ಕಾಣಿಸಿಕೊಂಡ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇಲ್ಲಿನ ಹುಳಿಮಾವು ಭಾಗದ ಅಪಾರ್ಟ್ಮೆಂಟ್ ಮುಂಭಾಗ ಶನಿವಾರ ಬೆಳಗ್ಗೆ 5:23ರ ಸುಮಾರಿಗೆ ಚಿರತೆ ರಸ್ತೆ ದಾಟಲು ಯತ್ನಿಸಿದೆ.
ಸಾಮಾನ್ಯವಾಗಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಕಾಡಿನ ಬಳಿ ಸುಳಿದಾಡುವ ಚಿರತೆಗಳು ನೈಸ್ರಸ್ತೆಯನ್ನು ದಾಟಿ ಹುಳಿಮಾವು, ಬೇಗೂರು, ಗೊಟ್ಟಿಗೆರೆ, ಬಸವನಪುರ ಮತ್ತು ವೀವರ್ಸ್ ಕಾಲನಿಯತ್ತ ನಾಯಿಗಳಿಗಾಗಿ ರಾತ್ರಿ ವೇಳೆ ಸುಳಿಯುತ್ತವೆ. ಹೀಗಾಗಿ ಮುಂಜಾನೆಯೂ ಬಂದಾಗ ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ ಎಂದು ಹೇಳಲಾಗುತ್ತಿದೆ.
Next Story