ಬಿಎಂಟಿಸಿ: ಫೆ.25ರಿಂದ ಮಾರ್ಚ್ ತಿಂಗಳ ಪಾಸ್ ವಿತರಣೆ
ಬೆಂಗಳೂರು, ಫೆ.24: ಬಿಎಂಟಿಸಿ ವತಿಯಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಮಾರ್ಚ್ ತಿಂಗಳ ಪಾಸ್ನ್ನು ಫೆ.25ರಿಂದಲೇ ವಿತರಿಸಲಾಗುತ್ತಿದೆ.
ಪ್ರಸ್ತುತ ಸಂಸ್ಥೆಯಲ್ಲಿ ಟಿಟಿಎಂಸಿ ಮತ್ತು ಬಸ್ ನಿಲ್ದಾಣಗಳನ್ನು ಒಳಗೊಂಡಂತೆ 65 ಸ್ಥಳಗಳಲ್ಲಿ ಮಾಸಿಕ ಪಾಸುಗಳನ್ನು ವಿತರಣೆ ಮಾಡಲಾಗುತ್ತಿದೆ. ಬೆಂಗಳೂರಿನ 17 ಸ್ಥಳಗಳಲ್ಲಿ ಖಾಸಗಿ ಏಜನ್ಸಿಗಳ ಮೂಲಕ ಮಾಸಿಕ ಪಾಸುಗಳನ್ನು ವಿತರಿಸಲಾಗುತ್ತಿದೆ.
ಬೆಂಗಳೂರು ಒನ್ ಎಲ್ಲಾ 200 ಕೇಂದ್ರಗಳಲ್ಲೂ ಮಾಸಿಕ ಪಾಸುಗಳು ವಿತರಿಸಲಾಗುತ್ತಿದೆ. ಹೊಸದಾಗಿ 48 ಸ್ಥಳಗಳಲ್ಲಿ ಪಾಸು ವಿತರಣಾ ಕೌಂಟರ್ಗಳನ್ನು ತೆರೆಯಲಾಗುತ್ತಿದೆ. ಪ್ರಯಾಣಿಕರಿಗೆ ಅನುಕೂಲವಾಗುವಂತೆ ಮಾಸಿಕ ಪಾಸಿನ ಕೌಂಟರ್ ಗಳು ಲಭ್ಯವಿಲ್ಲದ 12 ಬಸ್ ನಿಲ್ದಾಣಗಳಲ್ಲಿ ಸಾರಥಿ ವಾಹನಗಳ ಮೂಲಕ ಫೆಬ್ರವರಿ-27, 28, ಮತ್ತು ಮಾರ್ಚ್-1, 2 ರಂದು ಮಾಸಿಕ ಪಾಸುಗಳನ್ನು ವಿತರಿಸಲಾಗುವುದೆಂದು ಬಿಎಂಟಿಸಿ ಪ್ರಕಟನೆಯಲ್ಲಿ ತಿಳಿಸಲಾಗಿದೆ.
Next Story