ನಡು ರಸ್ತೆಯಲ್ಲೇ ಚೂರಿ ಇರಿದು ಮಹಿಳೆಯ ಕೊಲೆ
ಬೆಂಗಳೂರು, ಫೆ.28: ಮಹಿಳೆವೊಬ್ಬರನ್ನು ಮಾರಕಾಸ್ತ್ರದಿಂದ ದಾಳಿ ನಡೆಸಿ ಕೊಲೆಗೈದಿರುವ ಘಟನೆ ಇಲ್ಲಿನ ಎಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೋಲ್ಕತ್ತಾ ಮೂಲದ ಅಲೀಂ ಅಬಿ(35)ಎಂಬಾಕೆ ಕೊಲೆಯಾದವರು ಎಂದು ತಿಳಿದುಬಂದಿದೆ.
ಎಚ್ಎಎಲ್ನ ಬ್ರೂಕ್ಫೀಲ್ಡ್ ನಲ್ಲಿ ಈ ಘಟನೆ ನಡೆದಿದ್ದು, ರವಿವಾರ ಬೆಳಗ್ಗೆ ರಫೀಕ್ ಎಂಬಾತ ಮಹಿಳೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.
ನಗರದ ಮನೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಅಲೀಂ ಅಬಿ ಅವರಿಗೆ ರಫೀಕ್ ಎಂಬಾತನ ಜೊತೆ ಹಣ ಕಾಸಿನ ವಿಚಾರಕ್ಕೆ ಗಲಾಟೆಯಾಗಿತ್ತು. ಎಂದಿನಂತೆ ಬೆಳಗ್ಗೆ ಕೆಲಸಕ್ಕೆ ತೆರಳುತ್ತಿದ್ದಾಗ ರಫೀಕ್ ನಡು ರಸ್ತೆಯಲ್ಲೇ ಚಾಕುವಿನಿಂದ ಅಲೀಂಗೆ ಇರಿದು ಪರಾರಿಯಾಗಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಅಲೀಂ ಅಬಿ ಮೃತಪಟ್ಟಿದ್ದು, ಈ ಸಂಬಂಧ ಎಚ್ಎಎಲ್ ಠಾಣಾ ಪೊಲೀಸರು ಮೊದ್ದಕಮೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Next Story