ಕೋವಿಡ್ ನಿಯಮ ಉಲ್ಲಂಘನೆ: 1.60 ಲಕ್ಷ ರೂ. ದಂಡ ವಸೂಲಿ
ಸಾಂದರ್ಭಿಕ ಚಿತ್ರ
ಬೆಂಗಳೂರು, ಎ.26: ಕೋವಿಡ್ ನಿಯಮ ಉಲ್ಲಂಘನೆ ಆರೋಪ ಸಂಬಂಧ ಕಳೆದ 10 ದಿನಗಳಲ್ಲಿ ಒಟ್ಟು 1 ಲಕ್ಷದ 60 ಸಾವಿರ ರೂ.ಗಳನ್ನು ಬಿಬಿಎಂಪಿ ದಂಡ ಸಂಗ್ರಹ ಮಾಡಿದೆ.
ಕೋವಿಡ್ ಮಹಾಮಾರಿ ಎಲ್ಲೆಡೆ ಹಬ್ಬುತ್ತಿರುವ ಕಾರಣ ಸರಕಾರ ಕಠಿಣ ಕ್ರಮ ಕೈಗೊಂಡಿದ್ದು, ಇದರ ನಡುವೆಯೂ ಹಲವರು ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿದ್ದಾರೆ. ಸುರಕ್ಷಿತ ಅಂತರ ಕಾಯ್ದುಕೊಂಡಿರದ ಕಾರಣ 10 ಸಾವಿರ ರೂ. ದಂಡ ಸೇರಿದಂತೆ ಒಟ್ಟು 1 ಲಕ್ಷದ 60 ಸಾವಿರ ರೂಪಾಯಿ ಸಂಗ್ರಹಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Next Story