ಬೆಂಗಳೂರು:ಅಪಾರ್ಟ್ ಮೆಂಟ್ ನಲ್ಲಿ ಬೆಂಕಿ ಆಕಸ್ಮಿಕ; ಓರ್ವ ಮಹಿಳೆ ಮೃತ್ಯು,ಹಲವರಿಗೆ ಗಾಯ
photo - twitter@KeypadGuerilla
ಬೆಂಗಳೂರು: ನಗರದ ಬೊಮ್ಮನಹಳ್ಳಿ ಸಮೀಪದ ದೇವರಚಿಕ್ಕನಹಳ್ಳಿ ಬಳಿ ಆಶ್ರಿತ್ ಅಪಾರ್ಟ್ ಮೆಂಟ್ ನ ಫ್ಲ್ಯಾಟ್ ನಲ್ಲಿ ಗ್ಯಾಸ್ ಪೈಪ್ ಲೈನ್ ಸ್ಫೋಟವಾಗಿರುವ ಶಂಕೆಯಲ್ಲಿ ಕನಿಷ್ಠ ಓರ್ವ ಮಹಿಳೆ ಮೃತಪಟ್ಟಿರುವ ಬಗ್ಗೆ ಖಾಸಗಿ ವಾಹಿನಿ ವರದಿ ಮಾಡಿದೆ.
42 ವರ್ಷದ ಮಹಿಳೆ ಗಾಯಗಳಿಂದ ಸಾವನ್ನಪ್ಪಿದ್ದಾರೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಕಿಯ ಕೆನ್ನಾಲಿಗೆಗೆ ಗಾಯಗೊಂಡ ಇತರ ಐವರಲ್ಲಿ ಕೆಲವರನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಸೇರಿಸಲಾಗಿದೆ.
ಬೆಂಕಿಯು ಅಪಾರ್ಟ್ ಮೆಂಟ್ ನ 3 ಫ್ಲ್ಯಾಟ್ ಗಳಲ್ಲಿ ವ್ಯಾಪಿಸಿದೆ. ಫ್ಲ್ಯಾಟ್ ನಲ್ಲಿ ಸಿಲುಕಿರುವವರನ್ನು ರಕ್ಷಿಸಲು ಅಗ್ನಿ ಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಬೆಂಕಿ ನಂದಿಸಲು ಹರಸಾಹಸಪಡುತ್ತಿದ್ದಾರೆ. ಅಪಾರ್ಟ್ ಮೆಂಟ್ ನಲ್ಲಿ ಹಲವರು ಸಿಲುಕಿರುವ ಶಂಕೆ ಇದೆ.
Fire at apartment called Ashrith Aspire near IIM #Bangalore #Karnataka. Fire engines rushed to spot. Locals says people are trapped. pic.twitter.com/O2PpnAEQzu
— Imran Khan (@KeypadGuerilla) September 21, 2021
Next Story