ಬೆಂಗಳೂರಿನಲ್ಲಿ ಮತ್ತೆ ಡ್ರಂಕ್ ಅಂಡ್ ಡ್ರೈವ್ ತಪಾಸಣೆ ಆರಂಭ
ಸಾಂದರ್ಭಿಕ ಚಿತ್ರ
ಬೆಂಗಳೂರು, ಸೆ.25: ಕೊರೋನ ಕಾರಣದಿಂದ ಒಂದೂವರೆ ವರ್ಷದಿಂದ ಸ್ಥಗಿತವಾಗಿದ್ದ ಡ್ರಂಕ್ ಅಂಡ್ ಡ್ರೈವ್ ಟೆಸ್ಟ್ ತಪಾಸಣೆ ಇಂದಿನಿಂದ ಮತ್ತೆ ಶುರುವಾಗಲಿದೆ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ತಿಳಿಸಿದ್ದಾರೆ.
ತಜ್ಞರ ಸಲಹೆ ಪಡೆದು ಡ್ರಂಕ್ ಅಂಡ್ ಡ್ರೈವ್ ಟೆಸ್ಟ್ ಮಾಡಲಾಗುವುದು. ಆಲ್ಕೋಮೀಟರ್ ಮೂಲಕ ತಪಾಸಣೆ ಮಾಡುತ್ತೇವೆ. ಬಳಕೆ ಮಾಡಿದ ಆಲ್ಕೋಮೀಟರ್ಅನ್ನು ಮರು ಬಳಕೆ ಮಾಡಲಾಗುವುದು. ವಾಹನ ಸವಾರರು ಆಲ್ಕೋಮೀಟರ್ ಮೂಲಕ ಟೆಸ್ಟ್ಗೆ ಒಪ್ಪದ ಪಕ್ಷದಲ್ಲಿ, ರಕ್ತ ತಪಾಸಣೆ ಮಾಡಲಾಗುವುದು ಮಾಹಿತಿ ನೀಡಿದರು.
Next Story