ಡಿ.19ಕ್ಕೆ `ಬೆಂಗಳೂರು ವಕೀಲರ ಸಂಘ'ದ ಚುನಾವಣೆ
ಬೆಂಗಳೂರು, ನ.28: ಬೆಂಗಳೂರು ವಕೀಲರ ಸಂಘಕ್ಕೆ ಡಿ.19ರಂದು ಚುನಾವಣೆ ನಡೆಯಲಿದೆ ಎಂದು ಮುಖ್ಯ ಚುನಾವಣಾಧಿಕಾರಿಯಾಗಿರುವ ಕೆ.ಎನ್.ಫಣೀಂದ್ರ ತಿಳಿಸಿದ್ದಾರೆ.
ಹೈಕೋರ್ಟ್, ಸಿಟಿ ಸಿವಿಲ್ ಕೋರ್ಟ್, ಹೆಚ್ಚುವರಿ ಮುಖ್ಯ ಮೆಟ್ರೋ ಪಾಲಿಟಿನ್, ಮ್ಯಾಜಿಸ್ಟ್ರೇಟ್ ಕೋರ್ಟ್ ಹಾಗೂ ಮೇಯೋಹಾಲ್ ಕೋರ್ಟ್ಗಳಲ್ಲ್ಲಿ ವಕೀಲರಾಗಿರುವ 16 ಸಾವಿರಕ್ಕೂ ಹೆಚ್ಚು ನೊಂದಾಯಿತ ಮತದಾರರು ಮತದಾನದ ಅರ್ಹತೆ ಪಡೆದಿದ್ದಾರೆ.
ಸಿಟಿ ಸಿವಿಲ್ ಕೋರ್ಟ್ನಲ್ಲಿ ಡಿ.19ರಂದು ಮತದಾನ ನಡೆಯಲಿದ್ದು, ಅಂದು ಮಧ್ಯಾಹ್ನ ಮತ ಏಣಿಕೆ ಹಾಗೂ ಫಲಿತಾಂಶ ಪ್ರಕಟಗೊಳ್ಳಲಿದೆ. ಚುನಾವಣಾಕಾರಿಗಳಾಗಿ ಉನ್ನತಾಕಾರಿ ಸಮಿತಿ ಅಧ್ಯಕ್ಷ ಎಸ್.ಎಸ್.ಸತ್ಯನಾರಾಯಣ್, ಕೆ.ಎನ್.ಪುಟ್ಟೇಗೌಡ, ಟಿ.ಎನ್.ತಿಪ್ಪಾರೆಡ್ಡಿ, ಎಂ.ಆರ್.ವೇಣುಗೋಪಾಲ್, ಜಿ.ಚಂದ್ರಶೇಖರಯ್ಯ, ಎ.ಜಿ.ಶಿವಣ್ಣ, ಎಸ್.ಎನ್.ಪ್ರತಾಪ್ಚಂದ್ರ ಹಾಗೂ ಪಿ.ಅನುಚಂಗಪ್ಪ ಅವರು ಕಾರ್ಯನಿರ್ವಹಿಸಲಿದ್ದಾರೆ.
Next Story