ಬೆಂಗಳೂರು: ಮಾಡೆಲಿಂಗ್ ಹೆಸರಿನಲ್ಲಿ ಆನ್ಲೈನ್ನಲ್ಲಿ ಯುವತಿಯರಿಗೆ ವಂಚನೆ; ಆರೋಪಿ ಸೆರೆ
ಬೆಂಗಳೂರು, ಜ.11: ಮಾಡೆಲಿಂಗ್ ಹೆಸರಲ್ಲಿ 25ಕ್ಕೂ ಅಧಿಕ ಯುವತಿಯರಿಗೆ ವಂಚಿಸಿದ್ದ ಆರೋಪದಡಿ ಓರ್ವನನ್ನು ಇಲ್ಲಿನ ಹಲಸೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.
ಪ್ರಪಂಚನಚ್ಚಪ್ಪ ಬಂಧಿತ ಆರೋಪಿ ಎಂದು ಪೊಲೀಸರು ಗುರುತಿಸಿದ್ದಾರೆ.
ಆರೋಪಿ ಯುವತಿಯರನ್ನು ಆನ್ಲೈನ್ನಲ್ಲಿ ಸಂಪರ್ಕಿಸಿ ಮಾಡೆಲಿಂಗ್ಗೆ ಅವಕಾಶ ಕೊಡಿಸುವುದಾಗಿ ನಂಬಿಸಿ ವಂಚಿಸುತ್ತಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ.
ಆರೋಪಿಯ ಮೊಬೈಲ್ ವಶಪಡಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ.
Next Story