ನಕಲಿ ಸಾಲ ಪ್ರಕರಣಗಳಿಲ್ಲ: ಸಚಿವ ಎಸ್.ಟಿ. ಸೋಮಶೇಖರ್
ಬೆಂಗಳೂರು, ಮಾ.29: ಜಿಲ್ಲಾ ಸಹಕಾರ ಬ್ಯಾಂಕ್ಗಳಲ್ಲಿ ನಕಲಿ ಸಾಲ ನೀಡುವ ಪ್ರಕರಣಗಳು ರಾಜ್ಯದಲ್ಲಿ ಕಂಡು ಬಂದಿಲ್ಲ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಮಂಗಳವಾರ ವಿಧಾನ ಪರಿಷತ್ತಿನ ಕಲಾಪದಲ್ಲಿ ಅವರು, ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಉತ್ತಮವಾಗಿ ಕೆಲಸ ಮಾಡುತ್ತಿವೆ. 2016ರಿಂದ ಈವರೆಗೂ 1281 ಕೋಟಿ ರೂಪಾಯಿ ಸಾಲ ನೀಡಲಾಗಿದೆ. ಕೃಷಿಯೇತರರಿಗೂ ಸಾಲ ನೀಡಲಾಗಿದೆ. ಸುಸ್ತಿಯಾಗಿರುವ ಸಾಲ ವಸೂಲಿಗೂ ಕ್ರಮ ಕೈಗೊಂಡಿದ್ದೇವೆ ಎಂದರು.
ಬೇರೆ ಬೇರೆ ವಿಷಯಗಳಲ್ಲಿ ಈ ಬ್ಯಾಂಕ್ ಮೇಲೆ ತನಿಖೆ ನಡೆಸಲಾಗುತ್ತಿದೆ. ನಕಲಿ ಸಾಲದ ನಿರ್ದಿಷ್ಟ ಪ್ರಕರಣಗಳಿದ್ದರೆ ಅದನ್ನು ತನಿಖೆ ಮಾಡಿಸುತ್ತೇವೆ. ಇದೊಂದೆ ಅಲ್ಲ ರಾಜ್ಯದ ಯಾವ ಡಿಸಿಸಿ ಬ್ಯಾಂಕ್ನಲ್ಲೂ ನಕಲಿ ಸಾಲ ಕೊಟ್ಟಿರುವ ಪ್ರಕರಣಗಳು ನಡೆದಿಲ್ಲ ಎಂದು ನುಡಿದರು.
Next Story