ಪರಿಶಿಷ್ಟ ಪಂಗಡಕ್ಕೆ ಬಿಜೆಪಿ ನಾಯಕರಿಂದ ವಂಚನೆ, ಮೀಸಲಾತಿ ತೆಗೆಯುವ ಹುನ್ನಾರ: ಮಾಜಿ ಸಚಿವ ಎಚ್.ಆಂಜನೇಯ ಆರೋಪ | Vartha Bharati- ವಾರ್ತಾ ಭಾರತಿ

--

ಪರಿಶಿಷ್ಟ ಪಂಗಡಕ್ಕೆ ಬಿಜೆಪಿ ನಾಯಕರಿಂದ ವಂಚನೆ, ಮೀಸಲಾತಿ ತೆಗೆಯುವ ಹುನ್ನಾರ: ಮಾಜಿ ಸಚಿವ ಎಚ್.ಆಂಜನೇಯ ಆರೋಪ

ಬೆಂಗಳೂರು, ಮೇ 20: ವಾಲ್ಮಿಕಿ ನಾಯಕ ಸಮುದಾಯ ಬಹಳ ದೊಡ್ಡ ಇತಿಹಾಸವುಳ್ಳದ್ದು, ಇಂತಹ ಸಮುದಾಯಕ್ಕೆ ನ್ಯಾಯಯುತ ಮೀಸಲು ಹೆಚ್ಚಳ ಮಾಡುವುದಾಗಿ ಮಾತು ಕೊಟ್ಟ ಬಿಜೆಪಿ, ಈಗ ಈಡೇರಿಸದೇ ವಚನ ಭ್ರಷ್ಟವಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷರೂ ಆಗಿರುವ ಮಾಜಿ ಸಚಿವ ಎಚ್.ಆಂಜನೇಯ ಆರೋಪಿಸಿದ್ದಾರೆ.

ಶುಕ್ರವಾರ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತ ದಿಂದ ನಗರ ಜಿಲ್ಲಾಧಿಕಾರಿ ಕಚೇರಿ (ಕಂದಾಯ ಭವನ) ವರೆಗೆ ಮೆರವಣಿಗೆ ಹಮ್ಮಿಕೊಂಡಿದ್ದ ದಲಿತ ಸಂಘಟನೆಗಳ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆ ವೇಳೆ ಅಧಿಕಾರಕ್ಕೆ ಬರಲು ಎಲ್ಲ ವಾಮಮಾರ್ಗ ಅನುಸರಿಸಿದ ಬಿಜೆಪಿ, ಕೋಟೆ ಕೊತ್ತಲು ಆಳ್ವಿಕೆ ನಡೆಸಿದ, ಬುಡಕಟ್ಟು ಸಂಸ್ಕೃತಿ ಹೊಂದಿರುವ ನಾಯಕ ಸಮುದಾಯವನ್ನು ನಂಬಿಸಿ ವಂಚಿಸಿದೆ ಎಂದು ದೂರಿದರು.

ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಶ್ರೀರಾಮುಲು ಅವರನ್ನು ಉಪ ಮುಖ್ಯಮಂತ್ರಿ ಮಾಡುತ್ತೇವೆ, ಎಸ್ಟಿ ಮೀಸಲಾತಿ ಪ್ರಮಾಣ ಶೇ.7.5ಕ್ಕೆ ಹೆಚ್ಚಳ ಮಾಡುತ್ತೇವೆ ಎಂದು ಭರವಸೆ ನೀಡಿದ ಅಮಿತ್ ಷಾ ಇತರೆ ಬಿಜೆಪಿ ನಾಯಕರು, ತಮ್ಮ ಅಧಿಕಾರ ಅವಧಿ ಮುಗಿಯುತ್ತಾ ಬಂದರೂ ಬೇಡಿಕೆ ಈಡೇರಿಸುವುದಿರಲಿ, ನಾಯಕ ಸಮಾಜಕ್ಕೆ ಸ್ಪಂದಿಸುತ್ತಿಲ್ಲ. ಶ್ರೀರಾಮುಲು ಬಳಿ ಇದ್ದ ಸಮಾಜಕಲ್ಯಾಣ ಇಲಾಖೆ ಖಾತೆ ಕಿತ್ತುಕೊಳ್ಳಲಾಗಿದೆ. ವಾಲ್ಮಿಕಿ ಅಭಿವೃದ್ಧಿ ನಿಗಮಕ್ಕೆ ಅನುದಾನ ಕಡಿತ ಮಾಡಲಾಗಿದೆ. ಇನ್ನೂ ಇಂತಹ ಸರ್ಕಾರದಿಂದ ಮೀಸಲು ಪ್ರಮಾಣ ಹೆಚ್ಚಳ ನಿರೀಕ್ಷೆ ಮಾಡಲು ಸಾಧ್ಯವೇ ಇಲ್ಲ ಎಂದರು.

ವಾಲ್ಮೀಕಿ ಸ್ವಾಮೀಜಿ ಧರಣಿ ಆರಂಭಕ್ಕೆ ಮುಂದಾಗುತ್ತಿದ್ದಂತೆ ಅವರ ಮನವೊಲಿಸುವ ಸಣ್ಣ ಪ್ರಯತ್ನವನ್ನು ಮಾಡಲಿಲ್ಲ. ಪರಿಣಾಮ ಶೋಷಿತ ವರ್ಗದ ಸ್ವಾಮೀಜಿ ಮಳೆ, ಚಳಿ, ಬಿಸಿಲಲ್ಲಿ ನೂರು ದಿನ ಧರಣಿ ಪೂರೈಸಿದ್ದಾರೆ.

ಇದರ ಪರಿಣಾಮ ರಾಜ್ಯಾದ್ಯಂತ ವಾಲ್ಮಿಕಿ ನಾಯಕ ಸಮಾಜ ಬೀದಿಗೆ ಇಳಿದಿದೆ. ಈ ಹೋರಾಟಕ್ಕೂ ಮನ್ನಣೆ ದೊರೆಯದಿದ್ದರೆ, ಬಿಜೆಪಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ. ಹೋರಾಟದ ತೀವ್ರತೆ ಹೆಚ್ಚಾಗಲಿದೆ, ರಾಜಧಾನಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮೀಸಲಾತಿ ಹೆಚ್ಚಳ ಹಿನ್ನೆಲೆ ತಮ್ನದೇ ಸರ್ಕಾರ ನೇಮಿಸಿದ್ದ ನ್ಯಾ.ನಾಗಮೋಹನದಾಸ್ ಆಯೋಗ ವರದಿ ನೀಡಿ ವರ್ಷ ಕಳೆದಿದೆ. ಈ ವರದಿಯನ್ನು ಒಪ್ಪಿಕೊಳ್ಳುವ ಧೈರ್ಯ ವನ್ನೇ ಬಿಜೆಪಿ ಪ್ರದರ್ಶಿಸುತ್ತಿಲ್ಲ. ನೈತಿಕತೆ ಕಳೆದುಕೊಂಡಿರುವ ಬಿಜೆಪಿ ನಾಯಕರು ಕೋಮುಭಾವನೆ ಹುಟ್ಟುಹಾಕುವಲ್ಲಿ, ನಲವತ್ತು ಪರ್ಸೆಂಟ್ ಕಮಿಷನ್ ಪಡೆಯುವಲ್ಲಿ ನಿರತರಾಗಿದ್ದಾರೆ ಎಂದು ದೂರಿದರು.

ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳದ ಹಕ್ಕು ನೊಂದ ಎಲ್ಲ ಜಾತಿ ಜನರ ಹಕ್ಕು. ಆದರೆ ಬಿಜೆಪಿ ತಾನೇ ನೀಡಿದ ಭರವಸೆ ಮಾತನ್ನು ಮರೆತಿದ್ದು, ನಂಬಿದ ಜನರನ್ನು ವಂಚಿಸುತ್ತಿದೆ ಎಂದು ಆಕ್ರೋಶ ವ್ಯಕ್ರಪಡಿಸಿದರು.

ಇತ್ತೀಚೆಗೆ ದೇಶದ ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ ಮೂಲಕ ಮೀಸಲಾತಿಗೆ ಕೊಡಲಿ ಪೆಟ್ಟು ಬಿಜೆಪಿ ಸರ್ಕಾರ ನಿರಂತರ ಹಾಕುತ್ತಿದೆ. ಇಂತಹ ಜನವಿರೋಧಿ ಸರ್ಕಾರವನ್ನು ಕಿತ್ತು ಹಾಕಲು ನಾಯಕ ಸಮಾಜ ಹೋರಾಟವೇ ಮುನ್ನುಡಿ ಬರೆಯಲಿದೆ ಎಂದರು.

ನಿಷ್ಠೆ, ಪ್ರಾಮಾಣಿಕತೆ, ನಂಬಿಕೆಗೆ ಅರ್ಹವುಳ್ಳ ನಾಯಕ ಸಮುದಾಯ, ಶ್ರೀಗಳ ಧರಣಿ ನೂರು ದಿನ ಆಗಿದ್ದರೂ ಸರ್ಕಾರ ಸ್ಪಂದಿಸದೆ ಇರುವುದಕ್ಕೆ ಮನನೊಂದದಿದೆ. ಶೋಷಿತ ಜನರ ನೋವು ಸರ್ಕಾರಕ್ಕೆ ಶಾಪ ತಟ್ಟದೆ ಇರದು. ಶೀಘ್ರದಲ್ಲಿ ಈ ಬಿಜೆಪಿ ಸರ್ಕಾರ ತೊಲಗಲಿದೆ ಎಂದು ಆಂಜನೇಯ ಹೇಳಿದರು.

ದಲಿತ ಮುಖಂಡರಾದ ಶ್ರೀಧರ್ ಕಲಿವೀರ್. ಎಂ.ವೆಂಕಟಸ್ವಾಮಿ, ಎನ್.ಮೂರ್ತಿ, ಮೋಹನನಾಗರಾಜ್, ಹೆಣ್ಣೂರು ಶ್ರೀನಿವಾಸ, ಮಳವಳ್ಳಿ ಶಂಕರ್ ಇತರರು ಇದ್ದರು. 

ಶ್ರೀಗಳ ಧರಣಿ ಸ್ಥಳಕ್ಕೆ ಭೇಟಿ

ನೂರು ದಿನಗಳಿಂದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ನಡೆಸುತ್ತಿರುವ ಧರಣಿ ಸ್ಥಳಕ್ಕೆ ಆಂಜನೇಯ ಹಾಗೂ ದಲಿತ ಮುಖಂಡರು ಭೇಟಿ ನೀಡಿ ಶ್ರೀಗಳನ್ನು ಗೌರವಿಸಿದರು.

ಬಳಿಕ ಆಂಜನೇಯ ಮಾತನಾಡಿ, ತಾಳ್ಮೆಗೆ ಮತ್ರೊಂದು ಹೇಸರು ವಾಲ್ಮಿಕಿ ಸಮಾಜ. ಶ್ರೀಗಳ ಧರಣಿ, ಸಮುದಾಯ ರಾಜ್ಯಾದ್ಯಂತ ನಡೆಸುತ್ತಿರುವ ಪ್ರತಿಭಟನೆಯೇ ಸಾಕ್ಷಿ. ಇಂತಹ ಮುಗ್ಧ ಸಮಾಜಕ್ಕೆ ಬಿಜೆಪಿ ಸರ್ಕಾರ ವಂಚಿಸುತ್ತಿರುವುದು ಸರಿಯಲ್ಲ ಎಂದರು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top