ಬೆಂಗಳೂರು: ಕುಸಿದು ಬಿದ್ದು ಫುಡ್ ಡೆಲಿವರಿ ಬಾಯ್ ಮೃತ್ಯು
ಬೆಂಗಳೂರು, ಜೂ.23: ಫುಡ್ ಆರ್ಡರ್ ಮಾಡಿ ಕಾಯುತ್ತಿದ್ದ ಜಿಪ್ಟೋ ಕಂಪೆನಿ ಡೆಲಿವರಿ ಬಾಯ್ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಜರಾಜೇಶ್ವರಿನಗರ ವ್ಯಾಪ್ತಿಯಲ್ಲಿ ನಡೆದಿದೆ.
ಮೃತರನ್ನು ಹಲಗೆವಡೇರಹಳ್ಳಿ ನಿವಾಸಿ ಸಂತೋಷ್ಕುಮಾರ್ ಎಂದು ಗುರುತಿಸಲಾಗಿದೆ. ಆರ್.ಆರ್.ನಗರದ ಬೆಮೆಲ್ ಲೇಔಟ್ನಲ್ಲಿರುವ ಫುಡ್ ತಯಾರು ಮಾಡುವ ಜಿಪ್ಟೋ ಸಂಸ್ಥೆ ಇದೆ. ಬುಧವಾರ ಬೆಳಗ್ಗೆ ಸಂತೋಷ್ಕುಮಾರ್ ಫುಡ್ ಆರ್ಡರ್ ಮಾಡಿ ಕಂಪೆನಿ ಮುಂದೆ ಕಾಯುತ್ತಿದ್ದರು.
ಆ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಕುಸಿದುಬಿದ್ದು ಸಂತೋಷ್ಕುಮಾರ್ ಮೃತಪಟ್ಟಿದ್ದಾರೆ. ಹೃದಯಾಘಾತದಿಂದ ಸಂತೋಷ್ಕುಮಾರ್ ಮೃತಪಟ್ಟಿರಬಹುದೆಂದು ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಆರ್.ಆರ್.ನಗರ ಠಾಣೆ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
Next Story