ಬೆಂಗಳೂರು: ಸಿಎಂ ಬೊಮ್ಮಾಯಿ ಚಿತ್ರ ಇರುವ 'PAYCM' ಪೋಸ್ಟರ್ ಪ್ರತ್ಯಕ್ಷ !
ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್
photo - twitter
ಬೆಂಗಳೂರು: ನಗರದ ಹಲವೆಡೆ 'ಪೇ-ಸಿಎಂ' ಪೋಸ್ಟರ್ ಪ್ರತ್ಯಕ್ಷಗೊಂಡಿದ್ದು, ಚರ್ಚೆಗೆ ಗ್ರಾಸವಾಗಿದೆ.
ರಾಜ್ಯ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪಕ್ಕೆ ಸಂಬಂಧಿಸಿ ಪೇಟಿಎಂ ಮಾದರಿಯಲ್ಲಿ ರಚಿಸಲಾಗಿರುವ ‘ಪೇ ಸಿಎಂ’ ಪೋಸ್ಟರ್ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ.
ನಗರದ ಜಯಮಹಲ್ ರಸ್ತೆ, ಇಂಡಿಯನ್ ಎಕ್ಸ್ಪ್ರೆಸ್ ಬಳಿ ಈ ಪೋಸ್ಟರ್ ಕಾಣಿಸಿಕೊಂಡಿದೆ.
ಇತ್ತೀಚೆಗಷ್ಟೇ ತೆಲಂಗಾಣದ ಸಿಕಂದರಾಬಾದ್ ನ ಪರೇಡ್ ಮೈದಾನದ ಬಳಿ ‘40% ಕಮಿಷನ್ ಸಿಎಂಗೆ ಸುಸ್ವಾಗತ’ ಎಂಬ ಬ್ಯಾನರ್ ಹಾಕುವ ಮೂಲಕ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಗುರಿಯಾಗಿಸಿ, ಆಡಳಿತಾರೂಢ ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್ ಎಸ್) ವ್ಯಂಗ್ಯವಾಡಿತ್ತು.
ಕ್ರಮ ಕೈಗೊಳ್ಳುತ್ತೇವೆ: ಪ್ರತಾಪ್ರೆಡ್ಡಿ
ಬಿಬಿಎಂಪಿ ನೀಡಿರುವ ದೂರಿನನ್ವಯ ಸದ್ಯ ಪೋಸ್ಟರ್ ಅಂಟಿಸಿದವರ ವಿರುದ್ಧ ಕೇಂದ್ರ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ರೆಡ್ಡಿ ಮಾಹಿತಿ ನೀಡಿದ್ದಾರೆ.
As @INCKarnataka LP Chief @siddaramaiah seeks to move adjournment motion in Legislative assembly over '40% Commission' allegation against @BSBommai @BJP4Karnataka govt, @INCIndia plasters QR code titled "PayCM" across Bengaluru.@TheSouthfirst pic.twitter.com/JF2cvN2dlI
— Anusha Ravi Sood (@anusharavi10) September 21, 2022