ಬೆಂಗಳೂರು: ಮಾದಕ ವಸ್ತು ಮಾರಾಟ ಆರೋಪ; ವಿದೇಶಿ ಮಹಿಳೆ ಸೇರಿ ನಾಲ್ವರ ಬಂಧನ
ಬೆಂಗಳೂರು, ಡಿ.15: ಮಾದಕ ವಸ್ತು ಮಾರಾಟ ಆರೋಪ ಪ್ರಕರಣ ಸಂಬಂಧ ಓರ್ವ ವಿದೇಶಿ ಪ್ರಜೆ ಸೇರಿ ನಾಲ್ವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು 22 ಲಕ್ಷ ಮೌಲ್ಯದ ಮಾದಕವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ನೈಜೀರಿಯಾ ಪ್ರಜೆ ಜೊತೆಗೆ ಸೆಯ್ಯದ್, ವಸೀಂ ಹಾಗೂ ಆದೇಶ್ ನನ್ನು ಬಂಧಿಸಿ 22 ಲಕ್ಷ ಮೌಲ್ಯದ 160 ಗ್ರಾಂ ಎಂಡಿಎಂಎ ಎಕ್ಸ್ ಟೆನ್ಸಿ ಮಾತ್ರೆಗಳು, ಎಲ್ಎಸ್ ಡಿ ಸ್ಟ್ರಿಪ್ಸ್ಗಳು, 2ಕೆಜಿ ಗಾಂಜಾ,25 ಗ್ರಾಂ ಕೊಕೇನ್ ಮೊಬೈಲ್ ಗಳು ಹಾಗೂ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ.
Next Story