ಪಾರ್ವತಿ
ಮಂಗಳೂರು : ನಗರದ ಮಠದಕಣಿ ನಿವಾಸಿ ಬಿ.ವಿ.ಪಾರ್ವತಿ (87) ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅವರು ಮೂಲತಃ ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ, ವೈದ್ಯ ದಿ.ಡಾ.ಬಿ.ಕೆ.ವೆಂಕಟೇಶ್ವರ ಅವರ ಪತ್ನಿ. ಸಂಪಾಜೆ ಮಹಿಳಾ ಮಂಡಳದ ಸ್ಥಾಪಕಾಧ್ಯಕ್ಷೆ ಹಾಗೂ ಸಂಪಾಜೆ ಗ್ರಾ.ಪಂ.ನ ಪ್ರಥಮ ಮಹಿಳಾ ಸದಸ್ಯೆಯಾಗಿಯೂ ಕಾರ್ಯ ನಿರ್ವಹಿಸಿದ್ದರು. ಕೆಲ ವರ್ಷಗಳಿಂದ ಮಂಗಳೂರಿನಲ್ಲಿ ಪುತ್ರನೊಂದಿಗೆ ವಾಸವಿದ್ದರು. ನಾಲ್ವರು ಪುತ್ರಿಯರು, ಇಬ್ಬರು ಪುತ್ರರು ಅಪಾರ ಬಂಧುಗಳನ್ನು ಅಗಲಿದ್ದಾರೆ.
Next Story