ಹೂಡೆ ಸಾಲಿಹಾತ್ ಶಿಕ್ಷಣ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ
ಉಡುಪಿ, ಜ.26: ತೋನ್ಸೆ ಹೂಡೆಯ ಸಾಲಿಹಾತ್ ಶಿಕ್ಷಣ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಪಡುತೋನ್ಸೆ ಗ್ರಾಪಂ ಸದಸ್ಯೆ ಕುಸುಮ ಧ್ವಜಾರೋಹಣಗೈದರು. ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಸ್ಲಮ್ ಹೈಕಾಡಿ ಗಣರಾಜ್ಯೋತ್ಸವದ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಪದವಿ ಕಾಲೇಜು ಉಪ ಪ್ರಾಂಶುಪಾಲೆ ಸುಮಯ್ಯ, ಪದವಿ ಪೂರ್ವ ಕಾಲೇಜು ವಿಭಾಗದ ಪ್ರಾಂಶುಪಾಲೆ ದಿವ್ಯಾ ಪೈ, ಮುಖ್ಯೊ ಪಾಧ್ಯಾಯಿನಿಯರಾದ ಸುನಂದ, ಲವೀನ ಕ್ಲಾರ, ಶಾದತ್ ಉಪಸ್ಥಿರಿದ್ದರು.
ಸಬೀಲಾ ಕೌಸರ್ ಸ್ವಾಗತಿಸಿ ಮೌಲಾನ ಸಮೀರ್ ವಂದಿಸಿದರು. ಸವಿತಾ ಕಾರ್ಯಕ್ರಮ ನಿರೂಪಿಸಿದರು.
Next Story