ದ.ಕ.ಜಿಲ್ಲೆ: ಕೋವಿಡ್ಗೆ ನಾಲ್ವರು ಬಲಿ; 678 ಮಂದಿಗೆ ಕೊರೋನ ಪಾಸಿಟಿವ್
755 ಮಂದಿ ಸೋಂಕಿನಿಂದ ಗುಣಮುಖ
ಮಂಗಳೂರು, ಜ.27: ದ.ಕ.ಜಿಲ್ಲೆಯಲ್ಲಿ ಗುರುವಾರ ಕೋವಿಡ್ಗೆ ಮತ್ತೆ ನಾಲ್ಕು ಮಂದಿ ಬಲಿಯಾಗಿದ್ದಾರೆ. ಸತತ ಮೂರು ದಿನದಿಂದ ಜಿಲ್ಲೆಯಲ್ಲಿ ತಲಾ ನಾಲ್ಕು ಮಂದಿ ಕೋವಿಡ್ಗೆ ಬಲಿಯಾಗಿದ್ದು, ಇದರೊಂದಿಗೆ ಕೋವಿಡ್ಗೆ ಈವರೆಗೆ ಬಲಿಯಾದವರ ಸಂಖ್ಯೆ 1,735ಕ್ಕೇರಿದೆ.
ಗುರುವಾರ 678 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಕೋವಿಡ್ ಪಾಸಿಟಿವಿಟಿ ದರ ಶೇ.08.04 ದಾಖಲಾಗಿದೆ. ಅಲ್ಲದೆ 755 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ 1,30,612 ಪಾಸಿಟಿವ್ ಪ್ರಕರಣ ದಾಖಲಾಗಿದೆ. ಸೋಂಕಿತರ ಪೈಕಿ ಒಟ್ಟು 1,23,633 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಸದ್ಯ 5,244 ಸಕ್ರಿಯ ಪ್ರಕರಣವಿದೆ.
ದ.ಕ.ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಮಾಣಕ್ಕೆ ಸಂಬಂಧಿಸಿದಂತೆ ಗುರುವಾರ 2 ಕ್ಲಷ್ಟರ್ ವಲಯವನ್ನು ಗುರುತಿಸಲಾಗಿದೆ. ಬೆಳ್ತಂಗಡಿ ತಾಲೂಕಿನ ಶಾಲಾ ಹಾಸ್ಟೆಲೊಂದರ 119 ವಿದ್ಯಾರ್ಥಿಗಳ ಪೈಕಿ 31 ಮಂದಿಯಲ್ಲಿ ಮತ್ತು ಆಶ್ರಮವೊಂದರ 265 ಮಂದಿಯ ಪೈಕಿ 11 ಮಂದಿಯಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ.
ಕೋವಿಡ್ ನಿಯಮ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 94,266 ಪ್ರಕರಣ ದಾಖಲಿಸಿ, 1,14,03,980 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.