ಎಸೆಸೆಲ್ಸಿಪರೀಕ್ಷೆ: 613 ಅಂಕ ಗಳಿಸಿದ ಹಶಾ ಆಯೇಷಾ
ಮಂಗಳೂರು, ಮೇ 20: ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಪುತ್ತೂರು ಸುದಾನ ರೆಸಿಡೆನ್ಸಿಯಲ್ ಸ್ಕೂಲ್ ವಿದ್ಯಾರ್ಥಿನಿ ಹಶಾ ಆಯೇಷಾ 613 (98.08 ಶೇ.) ಅಂಕಗಳನ್ನು ಗಳಿಸಿ 'ಎ+' ಗ್ರೇಡ್ ನಲ್ಲಿ ಉತ್ತೀರ್ಣಳಾಗಿದ್ದಾಳೆ.
ಕನ್ನಡ, ಹಿಂದಿ ಹಾಗೂ ಸಮಾಜ ವಿಜ್ಞಾನ ವಿಷಯಗಳಲ್ಲಿ ತಲಾ 100 ಶೇ. ಅಂಕಗಳನ್ನು ಪಡೆದಿದ್ದಾಳೆ.
ಈಕೆ ಈ ಸಾಲಿನ ಸಮಸ್ತ ಮದ್ರಸ 10ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲೂ ಉತ್ತಮ ಸಾಧನೆ ಮಾಡಿದ್ದು, 400ರಲ್ಲಿ 394 ಅಂಕಗಳನ್ನು ಗಳಿಸಿ ಪುತ್ತೂರು ರೇಂಜ್ ಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಈಕೆ ಪುತ್ತೂರು ಪರ್ಲಡ್ಕ ನಿವಾಸಿ ಅಬ್ದುಲ್ ಹಮೀದ್ ಮತ್ತು ಶಮೀಮಾ ಬಾನು ದಂಪತಿಯ ಪುತ್ರಿ
Next Story