ಎಸೆಸೆಲ್ಸಿ ಫಲಿತಾಂಶ : ರಮ್ಲತ್ ಮೆಹಕ್ ಉನ್ನತ ಶ್ರೇಣಿಯಲ್ಲಿ ತೇರ್ಗಡೆ
ಮುಲ್ಕಿ, ಮೇ 21: ಎಸೆಸೆಲ್ಸಿ ಪರೀಕ್ಷೆಯಲ್ಲಿ ಕೆ.ಎಸ್. ರಾವ್ ನಗರ ನಿವಾಸಿ ಅಬ್ದುಲ್ ಕರೀಮ್ ಮತ್ತು ಶಮೀಮಾ ದಂಪತಿಯ ಪುತ್ರಿ ರಮ್ಲತ್ ಮೆಹೆಕ್ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ರಮ್ಲತ್ ಮೆಹೆಕ್ ಇಂಗ್ಲಿಷ್ ನಲ್ಲಿ 117, ಕನ್ನಡದಲ್ಲಿ 99, ಹಿಂದಿಯಲ್ಲಿ 99, ಗಣಿತದಲ್ಲಿ 91, ವಿಜ್ಞಾನದಲ್ಲಿ 85, ಹಾಗೂ ಸಮಾಜ ವಿಜ್ಞಾನದಲ್ಲಿ 97 ಅಂಕ ಸೇರಿ ಒಟ್ಟು 588 ಅಂಕ ಪಡೆದು A+ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ರಮ್ಲತ್ ಮೆಹೆಕ್ ಕೆ.ಎಸ್. ರಾವ್ ನಗರದ ಕೊಲ್ನಾಡು ಎಂಸಿಟಿ ಶಾಲೆಯ ವಿದ್ಯಾರ್ಥಿನಿ.
Next Story