ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ವತಿಯಿಂದ ಸನ್ಮಾನ
ಸುರತ್ಕಲ್ : ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ಸಮಿತಿಯ ವತಿಯಿಂದ ೨೦೨೧-೨೨ನೆ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ೬೨೫ಕ್ಕೆ ೬೨೫ ಅಂಕ ಗಳಿಸಿ ರಾಜ್ಯದಲ್ಲಿ ಪ್ರಥಮ ರ್ಯಾಂಕ್ ಪಡೆದ ಎಸ್ಸೆಸ್ಸೆಫ್ ಕಾಟಿಪಳ್ಳ ಶಾಖೆಯ ಸದಸ್ಯ ಆಬಿದ್ ಅಲಿ ಕಾಟಿಪಳ್ಳ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದಸ್ಯ ಹೈದರ್ ಆಲಿ ಕಾಟಿಪಳ್ಳ, ಎಸ್ಸೆಸ್ಸೆಫ್ ದ.ಕ. ವೆಸ್ಟ್ ಜಿಲ್ಲೆ ದಅವಾ ಕಾರ್ಯದರ್ಶಿ ಆರೀಫ್ ಝುಹುರಿ ಮುಕ್ಕ, ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ಪ್ರಧಾನ ಕಾರ್ಯದರ್ಶಿ ಆಸೀಫ್ ಪಕ್ಷಿಕೆರೆ, ಫಿನಾನ್ಸ್ ಸೆಕ್ರೆಟರಿ ತೌಸೀಫ್ ಬದ್ರಿಯಾ ನಗರ, ಕ್ಯಾಂಪಸ್ ಕಾರ್ಯದರ್ಶಿ ಅಫ್ರಿದ್ ಜಂಕ್ಷನ್, ಎಸ್ಸೆಸ್ಸೆಫ್ ಕಾಟಿಪಳ್ಳ ಸೆಕ್ಟರ್ ಅಧ್ಯಕ್ಷ ಹನೀಫ್ ಕೋಟೆ, ಎಸ್ಸೆಸ್ಸೆಫ್ ಕಾಟಿಪಳ್ಳ ಸೆಕ್ಟರ್ ಕ್ಯೂಡಿ ಕಾರ್ಯದರ್ಶಿ ಸ್ವವಾಝ್ ಕಾಟಿಪಳ್ಳ ಉಪಸ್ಥಿತರಿದ್ದರು.
Next Story