ಹೆಬ್ರಿ : ಮೇ ೨೨ರಂದು ಬೆಳಗ್ಗೆ ೮:೩೦ಕ್ಕೆ ಮುದ್ರಾಡಿ ಗ್ರಾಮದ ಭಕ್ರೆ ಎಂಬಲ್ಲಿರುವ ಮನೆಯಿಂದ ಕೆಲಸಕ್ಕೆಂದು ತೆರಳಿದ ಬಸವರಾಜ್ (48) ಎಂಬವರು ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ ಎಂದು ಪತ್ನಿ ಶಕುಂತಳಾ ಹೆಬ್ರಿ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಅದರಂತೆ ಮನುಷ್ಯ ಕಾಣೆ ಪ್ರಕರಣವನ್ನು ದಾಖಲಿಸಿರುವ ಪೊಲೀಸರು ತನಿಖೆ ನಡೆಸುತಿದ್ದಾರೆ.