ನರಿಂಗಾನ: ಮನೆಯಿಂದ ಇನ್ ವರ್ಟರ್ ಕಳವು
ಕೊಣಾಜೆ, ಜೂ.27: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನರಿಂಗಾನ ಗ್ರಾಮದ ಮೋರ್ಲಹಿತ್ಲುವಿನಲ್ಲಿ ಮನೆಮಂದಿ ವಾಸವಿಲ್ಲದ ಮನೆಯೊಂದರ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಇನ್ ವರ್ಟರ್ ಕದ್ದೊಯ್ದ ಘಟನೆ ವರದಿಯಾಗಿದೆ.
ಮನೆಯ ಯಜಮಾನ ಶೇಕಬ್ಬರ ಪುತ್ರರೆಲ್ಲರೂ ವಿದೇಶದಲ್ಲಿ ಉದ್ಯೋಗದಲ್ಲಿದ್ದು ಸೊಸೆಯಂದಿರು ತವರು ಮನೆಯಲ್ಲಿದ್ದಾರೆ. ಶೇಕಬ್ಬರ ಪತ್ನಿ ಎರಡು ವರ್ಷದ ಮೃತಪಟ್ಟ ಬಳಿಕ ಅವರು ತನ್ನ ಸಜಿಪದ ಮನೆಯಲ್ಲಿ ವಾಸಿಸುತ್ತಿದ್ದು ಮೋರ್ಲಹಿತ್ಲುವಿನ ಮನೆಗೆ ವಾರಕ್ಕೊಮ್ಮೆ ಬಂದು ಸ್ವಚ್ಛಗೊಳಿಸಿ ವಾಪಾಸಾಗುತ್ತಿದ್ದರು. ಅದೇರೀತಿ ರವಿವಾರ ಸಂಜೆ ಬಂದಾಗ ಕಳವು ಕೃತ್ಯ ಬೆಳಕಿಗೆ ಬಂದಿದೆ.
ಸುಮಾರು 23 ಸಾವಿರ ರೂ. ಮೌಲ್ಯದ ಇನ್ ವರ್ಟರ್ ಅನ್ನು ಕಳವಾಗಿರುವುದಾಗಿ ಕೊಣಾಜೆ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
Next Story