ದೇರಳಕಟ್ಟೆ: ಮಾಸಿಕ ಸಂಶುಲ್ ಉಲಮಾ ಮೌಲಿದ್
ದೇರಳಕಟ್ಟೆ: ಎಸ್.ಕೆ.ಎಸ್.ಎಫ್ ದೇರಳಕಟ್ಟೆ ಶಾಖೆಯ ವತಿಯಿಂದ ಮಾಸಿಕ ಸಂಶುಲ್ ಉಲಮಾ ಮೌಲಿದ್ ಮಜ್ಲಿಸ್ ನಡೆಯಿತು. ದೇರಳಕಟ್ಟೆ ಬದ್ರಿಯಾ ಜುಮಾ ಮಸೀದಿ ಖತೀಬ್ ಬಹು ಇಸ್ಹಾಖ್ ಫೈಝಿ ನೇತೃತ್ವವನ್ನು ನೀಡಿದರು.
ಈ ಸಂದರ್ಭದಲ್ಲಿ ದೇರಳಕಟ್ಟೆ ರೇಂಜ್ ಜಂ-ಈಯ್ಯತ್ತುಲ್ ಮುಅಲ್ಲಿಮೀನ್ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಬಹು ಅಬ್ದುಲ್ ಅಝೀಝ್ ಫೈಝಿ ಪಟ್ಟೋರಿ. ಪ್ರಧಾನ ಕಾರ್ಯದರ್ಶಿ ಬಹುಅಬ್ದುರ್ರಹ್ಮಾನ್ ದಾರಿಮಿ, ಕೋಶಾಧಿಕಾರಿ ಹಾಜಿ ಅಬೂಬಕ್ಕರ್ ಸ್ವಾಗತ್, ಪತ್ರಕರ್ತ ಬಶೀರ್ ಕಲ್ಕಟ್ಟ ಇವರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ದೇರಳಕಟ್ಟೆ ಎಸ್ ವೈ ಎಸ್ ಉಪಾಧ್ಯಕ್ಷರಾದ ಮೊಹಮ್ಮದ್ ಪನೀರ್. ಎಸ್ ವೈ ಎಸ್ ಮಾಜಿ ಅಧ್ಯಕ್ಷ ಹಾಜಿ ಮೊಹಮ್ಮದ್ ಅಲಿ. ಎಸ್ಕೆ ಎಸ್ ಎಸ್ ಎಫ್ ದೇರಳಕಟ್ಟೆ ಶಾಖೆಯ ಅಧ್ಯಕ್ಷ ಫೈಝಲ್ ಡಿ.ಎಂ.ಉಪಾಧ್ಯಕ್ಷ ಮೊಹಮ್ಮದ್ ಯಾಕೂಬ್ ಮತ್ತಿತರರು ಉಪಸ್ಥಿತರಿದ್ದರು.
Next Story