ಮಂಗಳೂರು: ವಿಶ್ವ ವೈದ್ಯರ ದಿನವಾದ ಅಂಗವಾಗಿ ಎಸ್ ವೈ ಎಸ್ ಕೆ.ಸಿ.ರೋಡ್ ಸೆಂಟರ್ ಇದರ ವತಿಯಿಂದ ವೈದ್ಯರನ್ನು ಸನ್ಮಾನಿಸಲಾಯಿತು.
ಎಸ್ ವೈ ಎಸ್ ಸೆಂಟರ್ ವ್ಯಾಪ್ತಿಯ ಮೂರು ಆಸ್ಪತ್ರೆ ಹಾಗೂ ಏಳು ವೈದ್ಯರನ್ನು ಫಲಪುಷ್ಪ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಎಸ್ ವೈ ಎಸ್ ರಾಜ್ಯಾಧ್ಯಕ್ಷ ಡಾ. ಝೈನಿ ಕಾಮಿಲ್ ಹಾಗೂ ಸೆಂಟರ್ ನೇತಾರರು ಉಪಸ್ಥಿತರಿದ್ದರು