ಬೆಳ್ಳಾರೆ; ವಿದ್ಯುತ್ ಸ್ಪರ್ಶಿಸಿ ಬಾಲಕ ಮೃತ್ಯು
ಸಾಂದರ್ಭಿಕ ಚಿತ್ರ
ಬೆಳ್ಳಾರೆ: ಸಮೀಪದ ಐವರ್ನಾಡು ಎಂಬಲ್ಲಿ ವಿದ್ಯುತ್ ಸ್ಪರ್ಶಿಸಿ 4 ವರ್ಷದ ಬಾಲಕನೋರ್ವ ಮೃತಪಟ್ಟ ಘಟನೆ ಶನಿವಾರ ನಡೆದಿದೆ.
ಮೃತ ಬಾಲಕನನ್ನು ಮಹಮ್ಮದ್ ಆದಿಲ್ ಎಂದು ತಿಳಿದುಬಂದಿದೆ. ಫ್ರಿಡ್ಜ್ ವಯರ್ ಸ್ಪರ್ಶಿಸಿದ ಕಾರಣ ಗಂಭೀರ ಗಾಯಗೊಂಡ ಆದಿಲ್ ಮೃತಪಟ್ಟಿರುವುದಾಗಿ ದೂರಲಾಗಿದೆ.
ಮೃತ ಬಾಲಕನ ಮೂಲ ನಿವಾಸ ಪುತ್ತೂರು ತಾಲೂಕಿನ ಕುಂಬ್ರ ಸಮೀಪದ ಘಟ್ಟಮನೆಯಾಗಿದ್ದು, ಬಾಲಕನ ತಾಯಿ ಮನೆ ಐವರ್ನಾಡಿನಲ್ಲಿದೆ. ಅವರು ಇಲ್ಲಿಗೆ ಬಂದಾಗ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಬಾಲಕ ಆದಿಲ್ನ ತಂದೆ ಕೂಲಿ ಕೆಲಸ ಮಾಡುತ್ತಿದ್ದಾರೆ. ಘಟನಾ ಸ್ಥಳಕ್ಕೆ ಬೆಳ್ಳಾರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದುಬರಬೇಕಿದೆ.
Next Story