ಗುಡ್ಡ ಕುಸಿದು ನಡುಪದವು-ಮೋಂಟುಗೋಳಿ ರಸ್ತೆ ಮತ್ತೆ ಬಂದ್
ಕೊಣಾಜೆ: ಭಾರೀ ಮಳೆಗೆ ಮಂಗಳವಾರ ನಡುಪದವು ಮೋಂಟುಗೋಳಿಗೆ ಹೋಗುವ ರಸ್ತೆಗೆ ಗುಡ್ಡ ಕುಸಿದು ಬಿದ್ದು ರಸ್ತೆ ಸಂಪೂರ್ಣ ಬಂದ್ ಆಗಿದೆ.
ಇತ್ತೀಷೆಗೆಯಷ್ಟೇ ಇದೇ ರಸ್ತೆಯ ಎರಡು ಕಡೆ ಗುಡ್ಡ ಹಾಗೂ ಆವರಣ ಗೋಡೆ ಕುಸಿದು ರಸ್ತೆ ಸಂಚಾರ ಬಂದ್ ಆಗಿತ್ತು. ಇದೀಗ ಮಂಗಳವಾರ ಇದೇ ರಸ್ತೆಯ ಇಳಿಜಾರು ಪ್ರದೇಶದಲ್ಲಿ ಗುಡ್ಡದ ಮಣ್ಣು ಕುಸಿದು ಬಿದ್ದು ರಸ್ತೆ ಬಂದ್ ಆಗಿದೆ. ಮಣ್ಣು ಕುಸಿತ ಸಂದರ್ಭದಲ್ಲಿ ಮರವೊಂದು ಉರುಳಿ ವಿದ್ಯುತ್ ತಂತಿಯ ಮೇಲೆರಗಿ ನಿಂತಿದೆ.
Next Story