ವಿಟ್ಲ; ಜೋಕಾಲಿಯ ಹಗ್ಗ ಕುತ್ತಿಗೆಗೆ ಬಿಗಿದು ಬಾಲಕಿ ಮೃತ್ಯು
ಸಾಂದರ್ಭಿಕ ಚಿತ್ರ
ಬಂಟ್ವಾಳ, ಆ.8: ಜೋಕಾಲಿಯಲ್ಲಿ ಆಡುತ್ತಿದ್ದ ವೇಳೆ ಜೋಕಾಲಿಯ ಹಗ್ಗ ಕುತ್ತಿಗೆಗೆ ಬಿಗಿದು ಬಾಲಕಿಯೊಬ್ಬಳು ಮೃತಪಟ್ಟ ಘಟನೆ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಅನಂತಾಡಿ ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ.
ಅನಂತಾಡಿ ಗ್ರಾಮದ ಬಾಬನಕಟ್ಟೆ ಶಾಲೆಯ ಆರನೇ ತರಗತಿಯ ವಿದ್ಯಾರ್ಥಿನಿ ಲಿಖಿತಾ (11) ಮೃತಪಟ್ಟ ಬಾಲಕಿ.
ಮನೆಯಲ್ಲಿದ್ದ ಜೋಕಾಲಿಯಲ್ಲಿ ಆಡುತ್ತಿದ್ದ ವೇಳೆ ಬಾಲಕಿಯ ಕುತ್ತಿಗೆಗೆ ಹಗ್ಗ ಬಿಗಿದು ಉಸಿರುಗಟ್ಟಿ ಮೃತಪಟ್ಟಿದ್ದಾಳೆ ಎಂದು ಹೇಳಲಾಗಿದೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story