ವಿಶ್ವ ಟೇಕ್ವಾಂಡೋ ಚಾಂಪಿಯನ್ ಶಿಪ್; ಮಂಗಳೂರಿನ ಸಂಹಿತಾಗೆ ಬೆಳ್ಳಿ
ಮಂಗಳೂರು : ಮಲೇಷ್ಯಾದ ಕೌಲಲಾಂಪುರ ಜುರಾ ಸ್ಟೇಡಿಯಂನಲ್ಲಿ ಇತ್ತೀಚೆಗೆ ನಡೆದ 14ನೇ ಅಂತಾರಾಷ್ಟ್ರೀಯ ಮಟ್ಟದ ಟೇಕ್ವಾಂಡೋ ಚಾಂಪಿಯನ್ಶಿಪ್ ಮಹಿಳಾ (ಕಿರಿಯ) ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ ಮಂಗಳೂರಿನ ಸಂಮಿತಾ ಅಲೆವೂರಾಯ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ.
2022ರಲ್ಲಿ ನೇಪಾಳದಲ್ಲಿ ನಡೆದ ವಿಶ್ವಮಟ್ಟದ ಟೇಕ್ವಾಂಡೋ ಕೂಟದಲ್ಲಿ ಚಿನ್ನದ ಪದಕ ಗಳಿಸಿದ್ದ ಸಂಹಿತಾ ಅವರು ಗುರುರಾಜ್ ಇಟಗಿ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ನಗರದ ಶಾರದಾ ವಿದ್ಯಾಲಯದ ಪ್ರಥಮ ಪಿಯುಸಿ ವಿದ್ಯಾರ್ಥಿನಿಯಾಗಿರುವ ಸಂಹಿತಾ ಕದ್ರಿ ವಾಸುದೇವ ಭಟ್ ಕುಂಜತ್ತೋಡಿ- ದೀಪಾ ಕೆ.ಎಸ್.ದಂಪತಿಯ ಪುತ್ರಿ.
Next Story