ಕಡಂಬು: ಎಸ್ ಡಿಪಿಐನಿಂದ ಸ್ವಾತಂತ್ರ್ಯ ದಿನಾಚರಣೆ
ವಿಟ್ಲ: ಎಸ್ ಡಿಪಿಐ ಕಡಂಬು ಘಟಕದ ವತಿಯಿಂದ ಸ್ವಾತಂತ್ರ್ಯದ ಅಮೃತಮಹೋತ್ಸವ ಆಚರಣೆ, ಕಡಂಬು ಜಂಕ್ಷನ್ ನಲ್ಲಿ ಪಕ್ಷದ ಕಚೇರಿ ಎದುರು ನಡೆಯಿತು.
ಎಸ್ ಡಿಪಿಐ ಕಡಂಬು ಘಟಕದ ಅಧ್ಯಕ್ಷ ಫಾರೂಕ್ ಕಡಂಬು ಹಾಗೂ ಸಾಮಾಜಿಕ ಕಾರ್ಯಕರ್ತ ಹನೀಫ್ ಪಿಲಿ ವಳಚ್ಚಿಲ್ ಅವರು ಧ್ವಜಾರೋಹಣವನ್ನು ನೆರವೇರಿಸಿದರು.
ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ಸದಸ್ಯ ಮುಹಮ್ಮದ್ ಕಡಂಬು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಪಕ್ಷದ ವಲಯ ಕಾರ್ಯದರ್ಶಿ ಝಕರಿಯ ಕಡಂಬು, ಮುಖಂಡರಾದ ಅಝೀಜ್ ಕಡಂಬು, ಶರೀಫ್ .ಪಿ ಹಾಗೂ ಸಾಮಾಜಿಕ- ಧಾರ್ಮಿಕ ಸಂಘ ಸಂಸ್ಥೆಯ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.