ಮಂಗಳೂರು ಬಾವುಟಗುಡ್ಡ ಈದ್ಗಾ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ
ಮಂಗಳೂರು; ಬಾವುಟಗುಡ್ಡ ಈದ್ಗಾ ಮಸ್ಜಿದ್ನಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಮಸೀದಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ, ಕೋಶಾಧಿಕಾರಿ ಸೈಯದ್ ಅಹ್ಮದ್ ಭಾಷಾ ತಂಙಳ್, ಸದಸ್ಯರಾದ ಎಸ್ಎಂ ರಶೀದ್ ಹಾಜಿ ನೆರವೇರಿಸಿದರು.
ಮಸೀದಿಯ ಖತೀಬ್ ಮುಹಮ್ಮದ್ ಸದಖತುಲ್ಲಾ ನದ್ವಿ ದುಆಗೈದರು. ಮಸೀದಿಯ ಮ್ಯಾನೇಜರ್ ಬಿ. ಅಬ್ದುಲ್ ರಹ್ಮಾನ್, ಮಸೀದಿಯ ಸಿಬ್ಬಂದಿ ಎನ್. ಝುಬೈರ್, ಸ್ಥಳೀಯರಾದ ಹಾಜಿ ರೊಹರ್ ಬಾವಾ, ಹಾಜಿ ರಿಯಾಝುದ್ದೀನ್ ಬಂದರ್, ಅಬ್ದುಲ್ಲ ಭಟ್ಕಳ್ ಮತ್ತಿತರರು ಪಾಲ್ಗೊಂಡಿದ್ದರು.
Next Story