ಕಣ್ಣೂರು ಪ್ರೌಢಶಾಲೆ, ವಿಮೆನ್ಸ್ ಪಿಯು ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆ
ಮಂಗಳೂರು, ಆ.15: ಅಡ್ಯಾರ್ ಕಣ್ಣೂರು ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಮತ್ತು ವಿಮನ್ಸ್ ಪಿಯು ಕಾಲೇಜಿನ ವತಿಯಿಂದ ಸೋಮವಾರ ಸ್ವಾತಂತ್ರ್ಯೋತ್ಸವ ಅಚರಿಸಲಾಯಿತು.
ಸಂಸ್ಥೆಯ ಹಿರಿಯ ಸದಸ್ಯ ಪಿ.ಮುಹಮ್ಮದ್ ಧ್ವಜಾರೋಹಣ ನೆರವೇರಿಸಿದರು. ಸಂಸ್ಥೆಯ ಉಪಾಧ್ಯಕ್ಷ ನಸೀಮಾ ಅಬ್ದುಲ್ ರಹ್ಮಾನ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಸಂಚಾಲಕ ರಿಯಾಝ್ ಕಣ್ಣೂರು ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು.
ಸಂಸ್ಥೆಯ ಕಾರ್ಯದರ್ಶಿ ಸಿತಾರ್ ಅಬ್ದುಲ್ ಮಜೀದ್ ಹಾಜಿ ಅತಿಥಿ ಭಾಷಣಗೈದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಉಮರಬ್ಬ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮರಿಯಂ ಅರ್ಶಿಯ ಭಾಷಣಗೈದರು. ಕಾಲೇಜಿನ ಮುಖ್ಯ ಶಿಕ್ಷಕಿ ಸಂಶಾದ್ ಸ್ವಾಗತಿಸಿದರು. ವಿಶಾಲಾಕ್ಷಿ ವಂದಿಸಿದರು.
ಪ್ರಾಥಮಿಕ ಶಾಲಾ ವಿಭಾಗದ ಫರ್ಹಾನ್ ಮತ್ತು ತಂಡ ಹಾಗೂ ಪ್ರೌಢ ಶಾಲಾ ವಿಭಾಗದ ಸಫಾರ ಮತ್ತು ತಂಡ ಸಮೂಹ ಹಾಡು ಹಾಡಿದರು.