ಮಂಗಳೂರು : ಫಾಲ್ಕನ್ ಪಿಯು ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆ
ಮುಸ್ಲಿಂ ಸ್ವಾತಂತ್ರ್ಯ ಹೋರಾಟಗಾರರ ವಿವರಗಳುಳ್ಳ ಗ್ಯಾಲರಿ ಉದ್ಘಾಟನೆ
ಮಂಗಳೂರು : ನಗರದ ಹಂಪನಕಟ್ಟೆಯಲ್ಲಿರುವ ಫಾಲ್ಕನ್ ಪಿಯು ಕಾಲೇಜಿನಲ್ಲಿ ಫಾಲ್ಕನ್ ಫೌಂಡೇಶನ್ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ನಿರ್ಮಿಸಲಾದ ಮುಸ್ಲಿಂ ಸ್ವಾತಂತ್ರ್ಯ ಹೋರಾಟಗಾರರ ವಿವರಗಳುಳ್ಳ ಗ್ಯಾಲರಿಯನ್ನು ವಿಪಕ್ಷ ಉಪನಾಯಕ ಯುಟಿ ಖಾದರ್ ಉದ್ಘಾಟಿಸಿದರು.
ಪ್ರಾಂಶುಪಾಲರಾದ ಅಬ್ದುಲ್ ರಹ್ಮಾನ್, ಅಡ್ಮಿನ್ ಕೋ ಆರ್ಡಿನೇಟರ್ ಮುಜಾಹಿದ್ ಹಸನ್ ಮತ್ತಿತರರು ಉಪಸ್ಥಿತರಿದ್ದರು.
ದೇಶಾದ್ಯಂತ ಫಾಲ್ಕನ್ ನ ವಿವಿಧ ಕಾಲೇಜುಗಳಲ್ಲೂ ಈ ಗ್ಯಾಲರಿಯನ್ನು ಪ್ರದರ್ಶನಕ್ಕೆ ಇಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಸುಬ್ ಹಾನ್ ಹೇಳಿದ್ದಾರೆ.