ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ
ಮಂಗಳೂರು: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಕಂಕನಾಡಿಯಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಪ್ರಿಯಾ ಲೇಡಿಸ್ ಹಾಸ್ಟೆಲ್ನ ಮ್ಯಾನೇಜರ್ ಶಾರದಾ ನಾಯ್ಕ, ಸ್ಮಾರ್ಟ್ ಮೆಡಿಕಲ್ನ ಮಾಲಕ ಫಝಲ್ ಅಹ್ಮದ್, ಕಾರ್ಸ್ ಲ್ಯಾಂಡ್ನ ಮಾಲಕ ತೌಸೀಫ್ ಜಂಟಿಯಾಗಿ ನೆರವೇರಿಸಿದರು.
ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ನ ಅಧ್ಯಕ್ಷ ರಿಯಾಝ್ ಅಹ್ಮದ್ ಸ್ವಾಗತಿಸಿದರು.
ಸದಸ್ಯರಾದ ಅಬ್ದುಲ್ ಸಲಾಮ್ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ಮಜೀದ್ ತುಂಬೆ ಸಹಕರಿಸಿದರು.
Next Story