ಕೊಲ್ನಾಡ್ ಶಾಫಿ ಜುಮಾ ಮಸೀದಿಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ
ಮುಲ್ಕಿ, ಆ.15: ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಯಲ್ಲಿ ಮುಲ್ಕಿ ಕೊಲ್ನಾಡು ಕೆ.ಎಸ್. ರಾವ್ ನಗರದ ಶಾಫಿ ಜುಮಾ ಮಸೀದಿಯಲ್ಲಿ ಧ್ವಜಾರೋಹನ ನೆರವೇರಿಸಲಾಯಿತು.
ರಾಷ್ಟ್ರ ಧ್ವಜಾರೋಹಣವನ್ನು ಮಸೀದಿಯ ಅಧ್ಯಕ್ಷ ಎಂ.ಇ. ಮುಹಮ್ಮದ್ ಹನೀಫ್ ನೆರವೇರಿಸಿದರು.
ಖತಿಬರಾದ ಮುಹಮ್ಮದ್ ಶರೀಫ್ ದಾರಿಮಿ ದುಆ ನೆರವೇರಿಸಿದರು. ಈ ಸಂದರ್ಭ ಉಪಾಧ್ಯಕ್ಷರಾದ ಬಶೀರ್ ಅಹ್ಮದ್, ಕಾರ್ಯದರ್ಶಿ ಮುಬೀನ್, ಜೊತೆ ಕಾರ್ಯದರ್ಶಿ ರಹೀಮ್ ಹಾಗೂ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸದರ್ ಮುಅಲ್ಲಿಮ್ ಇಂಬ್ರಾನ್ ದಾರಿಮಿ ನಿರ್ವಹಿಸಿದರು.
Next Story