ಪಂಜಿಮೊಗರು ಅಲ್-ಮಸ್ಜಿದುಲ್ ರಿಫಾಯಿಯ್ಯಾಯಿಂದ ಸ್ವಾತಂತ್ರ್ಯೋತ್ಸವ ಆಚರಣೆ
ಮಂಗಳೂರು, ಆ.16: ಪಂಜಿಮೊಗರು ಅಲ್-ಮಸ್ಜಿದುಲ್ ರಿಫಾಯಿಯ್ಯಾ ವತಿಯಿಂದ ದೇಶದ 76ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವು ಮಸೀದಿ ಅಧ್ಯಕ್ಷ ಅಹ್ಮದ್ ಬಶೀರ್ ಅಧ್ಯಕ್ಷತೆಯಲ್ಲಿ ನಡೆಯಿತು. ಧ್ವಜಾರೋಹಣನ್ನು ಗೌರವಾಧ್ಯಕ್ಷ ಅಬ್ಬುಲ್ಲಾ ನೆರವೇರಿಸಿದರು.
ಕೆ.ಎಂ.ಜೆ.ಎಂ. ಖತೀಬರಾದ ಇಕ್ರಮುಲ್ಲಾ ಸಖಾಫಿ, ಅಧ್ಯಕ್ಷರಾದ ಅಬ್ಬಾಸ್ ಹಾಜಿ, ಪ್ರ.ಕಾರ್ಯದರ್ಶಿ ಶೇಕಬ್ಬ, ಪಂಜಿಮೊಗರು ವಾರ್ಡ್ ಕಾರ್ಪೊರೇಟರ್ ಅನಿಲ್ ಕುಮಾರ್, ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ ಆಗಮಿಸಿದ್ದರು.
ಅಲ್-ಮಸ್ಜಿದುಲ್ ರಿಫಾಯಿಯ್ಯಾ ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮುಸ್ತಫಾ ಸ್ವಾಗತಿಸಿದರು. ಸವಾದ್ ಪಂಜಿಮೊಗರು ವಂದಿಸಿದರು.
Next Story